ಕಂಪ್ಲಿ

ಸಂವಿಧಾನದಿಂದ ಸಮಾತನೆಯ ಬದುಕು : ಆರ್‌.ಕೆ.ಶ್ರೀಕುಮಾರ

ಸಂವಿಧಾನದಿಂದ ಸಮಾತನೆಯ ಬದುಕು : ಆರ್‌.ಕೆ.ಶ್ರೀಕುಮಾರ

ಲೋಕದರ್ಶನ ವರದಿ

                ಕಂಪ್ಲಿ 26:  ಅಂಬೇಡ್ಕರ್ ಅವರು ಸಂವಿಧಾನ ನೀಡುವ ಮೂಲಕ ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಬದುಕುವ ಹಕ್ಕು ನೀಡಿದ್ದಾರೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಕೆ.ಶ್ರೀಕುಮಾರ ಹೇಳಿದರು. ಪಟ್ಟಣದ ಬಿಎಸ್‌ವಿ ಶಾಲಾ ಆವರಣದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ವಿವಿಧ ಸಂಘ-ಸಂಸ್ಥೆಯ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಈ ದೇಶದಲ್ಲಿ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಮೂಡಿತು. ಎಲ್ಲರೂ ಸಮಾನತೆಯಿಂದ ಬದುಕುವ ಹಕ್ಕು ಹೊಂದಿದ್ದಾರೆ ಎಂಬುದನ್ನು ಸಂವಿಧಾನ ತೋರಿ​‍್ಡಸಿದೆ. ಧರ್ಮ ಗ್ರಂಥಗಳು ಜನರನ್ನೇ ಬುಡಮೇಲು ಮಾಡಿವೆ.

              ಆದರೆ ಸಂವಿಧಾನ ಮಾತ್ರ ಒಗ್ಗೂಡಿಸುವ ಕೆಲಸ ಮಾಡಿದೆ. ಇದುವೇ ನಿಜವಾದ ರಾಷ್ಟ್ರದ ಧಾರ್ಮಿಕ ಗ್ರಂಥವಾಗಿದೆ ಎಂದು ಹೇಳಿದರು. ಪ್ರಾಂಶುಪಾಲ ಸಿದ್ದಣ್ಣ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಂವಿಧಾನವು ದೇಶದ ಸರ್ವ ಧರ್ಮಗ್ರಂಥಗಳಿಗಿಂತಲೂ ಶ್ರೇಷ್ಠ ಹಾಗೂ ಪವಿತ್ರ ಗ್ರಂಥವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನ ಪಾಲಿಗೆ ರಕ್ಷಾ ಕವಚವಾಗಿದೆ’ ಪ್ರಜಾಪ್ರಭುತ್ವದ ಮೂಲಾಧಾರವೇ ದೇಶದ ಸಂವಿಧಾನ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದ ಮರೆಯಲಾಗದ ದಿನ ಅದು’. ದೇಶದ ಕೋಟ್ಯಾಂತರ ಜನರು ಸಂವಿಧಾನ ಬದ್ಧವಾಗಿ ಮತದಾನ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಅಭಿವ್ಯಕ್ತಿ, ಸಮಾನತೆ ಹಾಗೂ ಜೀವಿಸುವ ಹಕ್ಕು ಪಡೆದುಕೊಂಡಿದ್ದಾರೆ. ಸಂವಿಧಾನದ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು. 

                ಮುಖಂಡ ಮರಿಸ್ವಾಮಿ ಸಣಾಪುರ, ವಸಂತರಾಜ್ ಕಹಳೆ ಅವರು ಸಂವಿಧಾನ ಒಳಗೊಂಡಂತಹ ಹಾಡುಗಳನ್ನು ಹಾಡಿದರು. ನಂತರ ಸಂವಿಧಾನ ಪ್ರತಿಜ್ಞಾವಿಧಿಯನ್ನು ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ಬೋಧಿಸಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಲ್ಲನಗೌಡ ಕೆ.ಎಸ್, ಶಿರಸ್ತಿದಾರ ರಮೇಶ್, ಕಂದಾಯ ನೀರೀಕ್ಷಕ ಎಸ್‌.ಸುರೇಶ, ಅಸ್ಪೃಶ್ಯ ವಿಮೋಚನಾ ಸಮಿತಿ ಜಿಲ್ಲಾಧ್ಯಕ್ಷ ಎನ್‌.ಬುಜ್ಜಿಕುಮಾರ, ಇಸಿಒ ಟಿ.ಎಂ.ಬಸವರಾಜ, ಬಿಎಸ್‌ವಿ ಶಾಲೆ ಮುಖ್ಯಶಿಕ್ಷಕಿ ಅನ್ನಪೂರ್ಣ, ಆಹಾರ ನೀರೀಕ್ಷಕ ವಿರುಪಾಕ್ಷಗೌಡ, ನಿಲಯ ಪಾಲಕರಾದ ಕೆ.ವಿರುಪಾಕ್ಷಪ್ಪ, ಎಂ.ಬಿ.ಶುಭಾ, ಮುಖಂಡರಾದ ಜಿ.ರಾಮಣ್ಣ, ಭಾವೈಕ್ಯ ವೆಂಕಟೇಶ್, ಟಿ.ವಿ.ಸುದರ್ಶನರೆಡ್ಡಿ, ಕರಿಯಪ್ಪ ಗುಡಿಮನಿ, ಮರಿಸ್ವಾಮಿ ಸಣಾಪುರ, ಸಿ.ಎ.ಚನ್ನಪ್ಪ, ಡಿ.ಬಸವರಾಜ್, ಮೆಟ್ರಿ ಬಸವರಾಜ್, ಡಿ.ಬಸವರಾಜ, ಯಲ್ಲಪ್ಪ. ಹೊನ್ನೂರ, ಹನುಮಂತ, ಎ.ಹುಸೇನಪ್ಪ, ಬಿ.ಕೆ.ವಿರುಪಾಕ್ಷಿ, ಮುತ್ತಣ್ಣ, ಚನ್ನಬಸವರಾಜ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ