20ರಂದು ಮೇಲೋಡಿಯಸ್ ಆರ್ಕೆಸ್ಟ್ರಾರವರಿಂದ ರಸಮಂಜರಿ ಕಾರ್ಯಕ್ರಮ
ರಾಣಿಬೆನ್ನೂರ 15: ತಾಲೂಕಿನ ಮೇಡ್ಲೇರಿ ಗ್ರಾಮದ ಬೀರೇಶ್ವರ ಸ್ವಾಮಿಯ ದಸರಾ ಹಬ್ಬದ ದೀಪೋತ್ಸವ ಅಂಗವಾಗಿ ತುಮಕೂರಿನ ಜ್ಯೋತಿ ಮೇಲೋಡಿಯಸ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ‌್ಯಕ್ರಮ ಮತ್ತು ಶಾಸಕ ಪ್ರಕಾಶ ಕೋಳಿವಾಡ ಇವರಿಗೆ ಗ್ರಾಮಸ್ಥರಿಂದ ಸನ್ಮಾನ ಮತ್ತು ಅಭಿನಂದನ ಸಮಾರಂಭವು ಅ. 20 ರಂದು ಸಂಜೆ 6.30 ಕ್ಕೆ ಗ್ರಾಮದ ಬೀರೇಶ್ವರ ರಂಗಮಂದಿರದಲ್ಲಿ ಏರಿ್ಡಸಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ದಿಳ್ಳೆಪ್ಪ ಅಣ್ಣೇರ ತಿಳಿಸಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಬೀರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಗೊರಜ್ಜ ಗೊರಮಾಳರ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ ಸಮಾರಂಭ ಉದ್ಘಾಟಿಸುವರು. ರಮೇಶ ಭಜಂತ್ರಿ, ರಾಜೇಂದ್ರ ಅಂಬಿಗೇರ, ವೆಂಕಟೇಶ ಬಣಕಾರ, ನಾಗಪ್ಪ ಹೀಲದಹಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.
ಅ. 15 ರಿಂದ ಅ. 23 ವರೆಗೆ ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ 9 ದಿನಗಳ ಕಾಲ ದಸರಾ ಹಬ್ಬದ ವಿವಿಧ ಧಾರ್ಮಿಕ ಪೂಜಾ ಕಾರ‌್ಯಕ್ರಮಗಳು ನಡೆಯಲಿದ್ದು ಗ್ರಾಮದ ಸರ್ವರೂ ಹಾಗೂ ಸುತ್ತಮುತ್ತಲ ಗ್ರಾಮದ ಶ್ರೀ ಬೀರೇಶ್ವರ ಸ್ವಾಮಿಯ ಭಕ್ತರು ಈ ಮಂಗಲಮಯ ಕಾರ‌್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಅಣ್ಣೇರ ಮನವಿ ಮಾಡಿದರು.
ಶಿವಪ್ಪ ಮೇಡ್ಲೇರಿ, ಬೀರೇಶ ಕೂನಬೇವು, ನಾಗರಾಜ ಬಾರ್ಕಿ, ನೀಲಪ್ಪ ಗೊರಮಾಳರ, ಭೋಜರಾಜ, ಬಿದ್ದಪ್ಪ ಇಕ್ಕೇರಿ ಮತ್ತಿತರರು ಸುದ್ದಿಗೋಷ್ಠಿಯಲಿ ಇದ್ದರು.