ಮಹಾರಾಷ್ಟ್ರ : ಮಲಮಗಳ ಮೇಲಿನ ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ
ಪಾಲ್ಘರ್, ಡಿಸೆಂಬರ್ 30: ಮಲಮಗಳ ಮೇಲೆ ಅತ್ಯಾಚಾರವೆಸಗಿದ
ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆಯಾಗಿದೆ.
ಬುಡಕಟ್ಟು ಜನಾಂಗದ 43 ವರ್ಷದ ವ್ಯಕ್ತಿ ಮಲ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದಲ್ಲಿ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಆದೇಶದ ಪ್ರತಿ ಬುಧವಾರ ತಿಳಿಸಿದೆ. ಅಪರಾಧಿಯು ಸಂತ್ರಸ್ತೆ, ತಾಯಿ ಮತ್ತು ಇಬ್ಬರು ಒಡಹುಟ್ಟಿದವರೊಂದಿಗೆ ತಲಸಾರಿ ತಾಲ್ಲೂಕಿನ ಭುಜಾದ್ಪದ ಗ್ರಾಮದಲ್ಲಿ ವಾಸಿಸುತ್ತಿದ್ದರು. ಕುಟುಂಬ ಸದಸ್ಯರು ಮಲಗಿದ್ದಾಗ ಆರೋಪಿಯು ಸಂತ್ರಸ್ತೆಯನ್ನು ಬೆದರಿಸಿ ಅತ್ಯಾಚಾರವೆಸಗುತ್ತಿದ್ದ. ಯಾರಿಗಾದರೂ ಹೇಳಿದರೆ ಕೊಲ್ಲುವ ಭೀತಿ ಹುಟ್ಟಿಸಿದ್ದ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.
ಆತನ ಕೃತ್ಯದ ಬಗ್ಗೆ ಸಂತ್ರಸ್ತೆಯ ತಾಯಿ ಅರಿತು ಪ್ರಶ್ನಿಸಿದ್ದರಿಂದ ಆರೋಪಿಯು ಆಕೆಯನ್ನು ಮನೆಯಿಂದ ಹೊರಹಾಕಿದ್ದ. 2017ರಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.