ರಾಣೆಬೆನ್ನೂರ

ರಾಣಿಬೆನ್ನೂರ: ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ

ರಾಣಿಬೆನ್ನೂರ: ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ

ರಾಣಿಬೆನ್ನೂರ: ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಖಾಯಿಲೆಗಳು ಆವರಿಸಿಕೊಂಡು ತಮ್ಮ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ. ಇಂತಹ ತಂಬಾಕು ಸೇವನೆಯಿಂದ ಮುಕ್ತರಾದಾಗ ಮಾತ್ರ ತಾವುಗಳು ಆರೋಗ್ಯವಂತರಾಗಿರಲು ಸಾಧ್ಯ ಎಂದು ಚಳಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಅಂಜನಾ ಹೇಳಿದರು. 

ತಾಲೂಕಿನ ಚಳಗೇರಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ಯೋಜನೆಯಿಂದ ಹಮ್ಮಿಕೊಳ್ಳಲಾಗಿದ್ದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂಬಾಕು ಸೇವನೆಗೆ ಇತ್ತೀಚಗೆ ಯುವಕರೂ ಸಹ ಹೆಚ್ಚಾಗಿ ಅಂಟಿಕೊಂಡಿದ್ದಾರೆ. ಆದರೆ ಇದು ಮುಂದೆ ಅವರ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬುದನ್ನು ಮರೆತಿದ್ದಾರೆ ಎಂದರು. 

ಯೋಜನಾಧಿಕಾರಿ ಮಂಜುನಾಥ ಎಂ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತರಾಗಿ ಮುನ್ನಡೆದಾಗ ಮಾತ್ರ ತಾವುಗಳು ಜೀವನದಲ್ಲಿ ಸದೃಢರಾಗಿರಲು ಸಾಧ್ಯ ಎಂದರು. 

ಲೆಕ್ಕ ಪರಿಶೋಧಕ ಮಂಜುನಾಥ, ಕೃಷಿ ಮೇಲ್ವಿಚಾರಕ ದೇವರಾಜ ಎಚ್, ಸೇವಾಪ್ರತಿನಿಧಿಗಳಾದ ವನಿತ, ವಿಜಯಮ್ಮ ಹಾಗೂ ಒಕ್ಕೂಟದ ಅಧ್ಯಕ್ಷರು, ಸಂಘದ ಸದಸ್ಯರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ