ಅಥಣಿ

ಸಮಾಜದಲ್ಲಿ ಸಾಮರಸ್ಯ ಮೂಡಿಸಲು ರಂಗೋತ್ಸವ: ಮಂಗಸೂಳಿ

ಸಮಾಜದಲ್ಲಿ ಸಾಮರಸ್ಯ ಮೂಡಿಸಲು ರಂಗೋತ್ಸವ: ಮಂಗಸೂಳಿ

ವೆಂಕಟೇಶ ದೇಶಪಾಂಡೆ 

ಅಥಣಿ 22: ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅಭಿಮಾನಿಗಳ ಬಳಗದ ನೇತೃತ್ವದಲ್ಲಿ ಅಥಣಿ ರೋಟರಿ ಕ್ಲಬ್ ಸಹಯೋಗದಲ್ಲಿ ಸ್ಥಳೀಯ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಪುರುಷರಿಗೆ ಹಾಗೂ ಬಳ್ಳೊಳ್ಳಿ ತೋಟದಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ರಂಗೋತ್ಸವ ಆಯೋಜಿಸಲಾಗಿತ್ತು.  

ಮುಂಜಾನೆ 9 ಗಂಟೆಯಿಂದಲೇ ಪ್ರಾರಂಭಗೊಂಡ ಪಕ್ಷಾತೀತ, ಧರ್ಮಾತೀತ ಈ ರಂಗೋತ್ಸವದಲ್ಲಿ ಚಿಕ್ಕಮಕ್ಕಳಿಂದು ಹಿಡಿದು 60 ವರ್ಷ ಮೇಲ್ಪಟ್ಟವರು ಕೂಡ ಭಾಗವಹಿಸಿ ಬಣ್ಣ ಆಡಿದರು. ಒಬ್ಬರಿಗೊಬ್ಬರು ಬಣ್ಣ ಎರಚುವುದು ಹಾಸ್ಯ ಚಟಾಕಿ ಹಾರಿಸುವುದು ಮಧ್ಯಾಹ್ನದವರೆಗೂ ನಡೆದುಕೊಂಡು ಬಂದಿತ್ತು. ವಿಶೇಷವಾಗಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಈ ಬಾರಿ ಒಂದೇ ವೇದಿಕೆಯಡಿ ರಂಗೋತ್ಸವದಲ್ಲಿ ಬಣ್ಣ ಆಡಿರುವುದು ಕೂಡ ವಿಶೇಷವಾಗಿತ್ತು.  

ಪುರಸಭಾ ಸದಸ್ಯರು, ನಿವೃತ್ ನೌಕರರು, ವ್ಯಾಪಾರಸ್ಥರು, ವೈದ್ಯರು, ಸಾಮಾಜಿಕ ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು, ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕೀಯರು ಹೀಗೆ ಎಲ್ಲ ವರ್ಗದ ಮಹಿಳೆಯರು ಹಾಗೂ ಪುರುಷರು ಭಾಗವಹಿಸಿ ಸಾಮಾಜಿಕ ಸಾಮರಸ್ಯಕ್ಕೆ ಕಾರಣರಾದರು. ಮನರಂಜನೆಗಾಗಿ ಎರಡೂ ರಂಗೋತ್ಸವದಲ್ಲಿ ಡಾಲ್ಬಿ ಅಳವಡಿಸಲಾಗಿತ್ತು ಡಾಲ್ಬಿ ಹಾಡುಗಳಿಗೆ ಎಲ್ಲರೂ ಕೂಡ ಡಾನ್ಸ ಮಾಡುತ್ತಿರುವುದು ಸಾಮಾನ್ಯವಾಗಿತ್ತು. ಎರಡೂ ರಂಗೋತ್ಸವದಲ್ಲಿ ಉಚಿತವಾಗಿ ರಸಾಯನಿಕ ರಹಿತ ಬಣ್ಣದ ವ್ಯವಸ್ಥೆ ಮಾಡಲಾಗಿತ್ತು.  

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ಹೋಳಿ ಹಬ್ಬದ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಈ ರೀತಿಯ ರಂಗೋತ್ಸವ ಆಯೋಜಿಸಲಾಗಿದೆ ಮತ್ತು ಈ ರಂಗೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಹಾಗೂ ಮಹಿಳೆಯರು ಆಗಮಿಸಿ ಬಣ್ಣ ಆಡಿರುವುದು ವಿಶೇವಾಗಿತ್ತು. ಇದೇ ರೀತಿ ಮುಂದೆಯೂ ಸಹ ರಂಗೋತ್ಸವ ಆಚರಿಸುವುದಾಗಿ ಹೇಳಿದರು.  

ನಿವೃತ್ ಇಂಜನೀಯರ್ ಅರುಣ ಯಲಗುದ್ರಿ, ಪುರಸಭಾ ಸದಸ್ಯ ರಾವಸಾಹೇಬ ಐಹೊಳೆ, ರೋಟರಿ ಕ್ಲಬ್ ನ ಡಾ.ಅಮೃತ ಕುಲಕರ್ಣಿ, ಶ್ರೀಕಾಂತ ಅಥಣಿ, ಡಾ.ಆನಂದ ಕುಲಕರ್ಣಿ, ವ್ಯಾಪಾರಸ್ಥ ಶೇಖರ ಕೋಲಾರ, ಕಾಂಗ್ರೆಸ್ ಮುಖಂಡ ಸಿದ್ಧಾರ್ಥ ಸಿಂಗೆ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ಒಬ್ಬರಿಗೊಬ್ಬರು ಬಣ್ಣ ಎರಚಿದರು. 


ಸುದ್ದಿ ಓದಿ