ರಾಣೆಬೆನ್ನೂರ

ರಾಣೇಬೆನ್ನೂರು ಲಯನ್ಸ್ ಶಿಕ್ಷಣ ಸಂಸ್ಥೆ ಮಹರ್ಷಿ ವಾಲ್ಮೀಕಿ ಜಯಂತೋತ್ಸವ

ರಾಣೇಬೆನ್ನೂರು ಲಯನ್ಸ್ ಶಿಕ್ಷಣ ಸಂಸ್ಥೆ ಮಹರ್ಷಿ ವಾಲ್ಮೀಕಿ ಜಯಂತೋತ್ಸವ

ರಾಣೇಬೆನ್ನೂರು :೦೪:  ಮೆಡ್ಲೇರಿ  ರಸ್ತೆಯ  ಎಂ ಜಿ ಈ ಶಿಕ್ಷಣ ಸಂಸ್ಥೆಯ ಲಯನ್ಸ್ ಶಾಲಾ ಸಭಾಭವನದಲ್ಲಿ  ಲಯನ್ಸ್ ಶಾಲೆ ಹಾಗೂ ಲಯನ್ಸ್ ಸೇವಾ ಸಂಸ್ಥೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಶ್ರೀಗಳವರ ಜಯಂತೋತ್ಸವವನ್ನು, ಆಚರಿಸಲಾಯಿತು. 

ಲಯನ್ಸ್ ಸೇವಾ ಸಂಸ್ಥೆ  ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಅವರು  ಮಹರ್ಷಿ ವಾಲ್ಮೀಕಿಯವರ ಮೂಲ ಹೆಸರು ರತ್ನಾಕರ. ವಾಲ್ಮೀಕಿಯು ಬ್ರಹ್ಮದೇವನ ಮಾನಸ ಪುತ್ರ. ಪ್ರಚೇತಾನ ಸಂತಾನವೆಂದು ಹೇಳಲಾಗಿದೆ. ಇನ್ನು ತಜ್ಞರ ಪ್ರಕಾರ ವಾಲ್ಮೀಕಿ ಮಹರ್ಷಿಯವರು ಕಶ್ಯಪ ಮತ್ತು ಚರ್ಷನಿಯ ಮಗನೆಂದು ಹೇಳಲಾಗಿದೆ. ನಾರದ ಮುನಿಗಳ ಸೂಚನೆಯಂತೆ ರಾಮ ನಾಮವನ್ನು ಜಪಿಸಲು ಪ್ರಾರಂಭಿಸುತ್ತಾರೆ. ಆದರೆ ಅವರ ಬಾಯಿಂದ ಮರಾ-ಮರಾ ಎಂದು ಹೇಳುತ್ತಾರೆ. 24000 ಸಾವಿರ ಪದ್ಯಗಳನ್ನೊಳಗೊಂಡ ರಾಮಾಯಣವನ್ನು ಸಂಸ್ಕೃತದಲ್ಲಿ ಬರೆಯುತ್ತಾರೆ.ಈ ರಾಮಾಯಣವನ್ನು ಅತ್ಯಂತ ಹಳೆಯ ರಾಮಾಯಣ ಎಂದು ಕರೆಯುತ್ತಾರೆ ಎಂದು ಹೇಳಿದರು.  ಶಿಕ್ಷಕರಾದ  ಎಸ್. ಎಂ.ಎಳೆಹೊಳೆ, ಜಿ.ಎಂ.ಬಿದರಿ ಅವರುಗಳು  ಶ್ರೀ ಮಹರ್ಷಿ ವಾಲ್ಮೀಕಿಯವರ ಕುರಿತಂತೆ ಉಪನ್ಯಾಸ ನೀಡಿದರು. ಅತ್ಯಂತ ಸರಳವಾಗಿ, ಸಾವಿರಾರು ವಿದ್ಯಾರ್ಥಿಗಳೊಂದಿಗೆ ನಡೆದ ಜಯಂತೋತ್ಸವದಲ್ಲಿ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕ ಎಂ.ಜಿ.ಮಣ್ಣಮ್ಮನವರ, ಸ್ವಾಗತಿಸಿದರು  ಇನ್ನೋರ್ವ ಶಿಕ್ಷಕ ಎಂ.ಎಚ್. ಪಾಟೀಲ್ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ