ರಾಣೆಬೆನ್ನೂರು ಕಾ ರಾಜಾ: 21 ಅಡಿ ಎತ್ತರದ ವಿಜ್ಞೇಶ್ವರ ಮೂರ್ತಿಯ ವಿಸರ್ಜನೆ
ರಾಣೆಬೆನ್ನೂರು 29: ನಗರದ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಿರುವ ಒಂದೇ ಮಾತರಂ ಸ್ವಯಂಸೇವಾ ಸಂಸ್ಥೆ, ದಶಾವತಾರ, ಪುರಾಣ ಪ್ರಸಿದ್ಧ ಇತಿಹಾಸ ಮಹಾಮಂಟಪದಲ್ಲಿ 21 ಅಡಿ ಎತ್ತರದ ಬೃಹತ್ ಗಣೇಶನ ಉತ್ಸವಮೂರ್ತಿಯ ವಿಸರ್ಜನಾ ಕಾರ್ಯಕ್ರಮವು ಬುಧವಾರ ರಾತ್ರಿ ಸಾಂಗೋಪ ಸಾಂಗವಾಗಿ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಕ್ರೀಡಾಂಗಣದಿಂದ ಭಾರಿ ಸಮುದಾಯದೊಂದಿಗೆ ಹೊರಟ ಭವ್ಯ ಅಲಂಕೃತ ಮೆರವಣಿಗೆಯು ಜನಾಕರ್ಷಣೆಯವಾಗಿತ್ತು, ಸಾವಿರಾರು ಯುವಕರು ಡಿಜೆ ಹೊರಸೂಸುವ ಭಾರಿ ಸಪ್ಪಳಕ್ಕೆ ಕುಣಿದು,ಕುಣಿದು ಕುಪ್ಪಳಿಸುತ್ತಿರುವುದು, ನಗರದ ಜನತೆಗೆ ಬಾರಿ ಖುಷಿ ತರುವಂತಿತ್ತು. ಕುರುಬಗೇರಿ ವೃತ್ತ,, ಮೌನೇಶ್ವರ ದೇವಸ್ಥಾನ ರಸ್ತೆ, ದುರ್ಗಾ ವೃತ್ತ, ಜನತಾ ಬಜಾರ್, ಮಹಾತ್ಮ ಗಾಂಧಿ ರಸ್ತೆ, ಚಕ್ಕ್ ಮಕ್ಕಿ ದುರ್ಗಾ ದೇವಿ ಗುಡಿ, ದೊಡ್ಡಪೇಟೆ, ಸುಭಾಸ ವೃತ್ತ ನಂತರ ಕೊಟ್ಟೂರೇಶ್ವರ ಮಠ, ರಂಗನಾಥನಗರ, ಸಂಗಮ ವೃತ್ತ, ಅಶೋಕ ವೃತ್ತ, ಅಶೋಕನಗರ, ಧಾವಿಷಿ, ಬಸ್ಟಾಂಡ್ ಬಳಿ ಬಂದಾಗ ರಾತ್ರಿ 9:30. ಮುಂದುವರೆದ ಮೆರವಣಿಗೆಯೂ, ಇಂಜಿನಿಯರ್ ಕಾಲೇಜು ಬಳಿಯಿಂದ, ಶೋಭಯಾತ್ರೆ ಸಾಂಗತ್ಯ ಗೊಂಡು, ನಂತರ ಸಾಂಪ್ರದಾಯಕವಾಗಿ ಅತ್ಯಂತ ಭಕ್ತಿ ಭಾವದೊಂದಿಗೆ 21 ಅಡಿ ಎತ್ತರದ ಭಾರಿ ಗಾತ್ರದ ಮೂರ್ತಿಯನ್ನು ಹಾರಿ ಜಯಘೋಷಗಳೊಂದಿಗೆ ವಿಸರ್ಜಿಸಲಾಯಿತು ನೆರವೇರಿಸಲಾಯಿತು.
ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ನಿಗದಿಪಡಿಸಿದ ಶೋಭಾಯಾತ್ರ ಸ್ಥಳದಲ್ಲಿ ಬ್ಯಾರಿಕೇಡ್ ನಿರ್ಮಿಸಿ, ಜನ ಸಮುದಾಯವನ್ನು ನಿಯಂತ್ರಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿತ್ತು ಅದ್ದೂರಿ ಮೆರವಣಿಗೆ 50ಕ್ಕೂ ಹೆಚ್ಚು ಕಲಾಪ್ರಕಾರಗಳ ನೂರಕ್ಕೂ ಹೆಚ್ಚು ಕಲಾವಿದರು ತಮ್ಮ ಕಲೆಯ ಮೂಲಕ ಸಂಸ್ಕೃತಿ ಅನಾವರಣಗೊಳಿಸಿ, ಮೆರಗು ತಂದಿದ್ದರು. ವಂದೇಮಾತರಂ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ, ರೂಪಾ ಚಿನ್ನಿಕಟ್ಟಿ,, ಪ್ರಭಾವತಿ ತಿಳುವಳ್ಳಿ, ಸಿದ್ದಪ್ಪ ಬಾಗಲದವರ, ಹುಚ್ಚಪ್ಪ ಮೇಡ್ಲೇರಿ, ನಾಗರಾಜ್ ಅಡ್ಮನಿ, ಹನುಮಂತಪ್ಪ ಹೆದ್ದೇರಿ,, ಕೊಟ್ಟಪ್ಪ ಮರಿಯಮ್ಮನವರ, ರಾಘವೇಂದ್ರ ಚಿನ್ನಿಕಟ್ಟಿ,, ವೀರೇಶ ಹೆದ್ದೇರಿ, ಶಶಿಧರ್ ಬಸವನಾಯಕ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ನೂರಾರು ಯುವಕರು ಯಶಸ್ವಿಗೆ ಕಾರಣೀಭೂತರಾಗಿದ್ದರು.