ಮಾಜಿ ಶಾಸಕ ರಾಜು ಕಾಗೆ ಭೇಟಿಯಾದ ರಮೇಶ
ಲೋಕದರ್ಶನ ವರದಿ
ಕಾಗವಾಡ 18: ಮಾಜಿ ಶಾಸಕ ರಾಜು ಕಾಗೆ ಹಾಗೂ ನಾವು ಇಬ್ಬರು ಹಳೆಯ ಸ್ನೇಹಿತರು. ಅವರು ಅನಾರೋಗ್ಯವಾಗಿದ್ದಾಗ ಭೇಟ್ಟಿಯಾಗಲು ಆಗಿರಲಿಲ್ಲ. ಈಗ ಉಗಾರ ಮಾರ್ಗವಾಗಿ ಅಥಣಿಗೆ ತೆರಳುವಾಗ ಗೆಳೆಯನ ನೆನಪು ಆಗಿರುವದರಿಂದ ಅವರನ್ನು ಭೇಟ್ಟಿಯಾಗಿ ಆರೋಗ್ಯ ವಿಚಾರಿಸಲು ಬಂದಿದ್ದೆನೆ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಚರ್ಚೆ ಇಲ್ಲ. ಎಂದು ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು ಗುರುವಾರ ದಿ. 18ರಂದು ಉಗಾರ ಖುರ್ದ ಪಟ್ಟಣದ ಮಾಜಿ ಶಾಸಕ ರಾಜು ಕಾಗೆಯವರ ನಿವಾಸಕ್ಕೆ ಭೇಟ್ಟಿ ನೀಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜು ಕಾಗೆಯವರು ಅವರ ಪಕ್ಷದ ಪರ ಪ್ರಚಾರ ಕೈಗೊಳ್ಳುತ್ತಾರೆ. ನಾನು ನಮ್ಮ ಪಕ್ಷದ ಪರ ಪ್ರಚಾರ ಕೈಗೊಳ್ಳುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವುದು ಬೇಡ ಎಂದು ಪತ್ರಕರ್ತರಿಗೆ ರಮೇಶ ಜಾರಕಿಹೊಳಿ ಹೇಳಿದರು.
ನಾನು ಪಕ್ಷದ ಶಿಸ್ತಿನ ಶಿಪಾಯಿ ಕಾಗೆ;
ರಮೇಶ ಜಾರಕಿಹೊಳಿ ಹಾಗೂ ನಾವು ಇಬ್ಬರು ಸ್ನೇಹಿತರು ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿ ಆಸ್ಪತ್ರೆಯಲ್ಲಿದ್ದೇ. ಈಗ ಆರಾಮವಾಗಿ ಬಂದಿರುವುದರಿಂದ ಭೆೇಟಿಯಾಗಿ ಆರೋಗ್ಯ ವಿಚಾರಿಸಲು ಬಂದಿದ್ದರು. ಇದರಲ್ಲಿ ರಾಜಕೀಯ ಯಾವುದೇ ವಿಷಯ ಚರ್ಚೆ ಮಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೋ ಅವರ ಪರ ಪ್ರಚಾರ ಮಾಡುವುದಾಗಿ ತಿಳಿಸಿದರು.
ಕಾಗವಾಡ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಬೋರಗಾಂವದ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಸೇರಿದಂತೆ ಅನೇಕ ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.