ಬೈಲಹೊಂಗಲ

ರಂಜಾನ್‌: ಶ್ರದ್ಧೆ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ

ರಂಜಾನ್‌: ಶ್ರದ್ಧೆ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ

ಲೋಕದರ್ಶನ ವರದಿ 

ಬೈಲಹೊಂಗಲ 04: ಪಟ್ಟಣದಲ್ಲಿ ಮುಸ್ಲಿಂ ಸಮಾಜ ಬಾಂಧವರು ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನಕ್ಕೆ ತೆರಳಿ ಮಂಗಳವಾರ ಶ್ರದ್ಧೆ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  

        ಮುಸ್ಲಿಂ ಬಾಂಧವರ ಭವ್ಯ ಮೆರವಣಿಗೆ ಬೆಲ್ಲದಕೂಟ, ಗೊಂಬಿಗುಡಿ, ಜವಳಿಕೂಟ, ಬಜಾರ ರಸ್ತೆ, ರಾಯಣ್ಣ ವೃತ್ತ, ಬಸ್ ನಿಲ್ದಾಣ, ಇಂಚಲ ಕ್ರಾಸ್ ಮಾರ್ಗವಾಗಿ ಈದ್ಗಾ ಮೈದಾನಕ್ಕೆ ತಲುಪಿತು. ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶಂಕರ ಮಾಡಲಗಿ ಮೆರವಣಿಗೆ ಮೇಲೆ ಪುಷ್ಪಮಳೆ ಗೈದು ಹಬ್ಬದ ಶುಭಾಶಯ ತಿಳಿಸಿದರು. ಜವಳಿ ಕೂಟದಲ್ಲಿ ಜೈ ಕರ್ನಾಟಕ ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ಸುರೇಶ ಮೆಟಗುಡ್ಡ, ಪುರಸಭೆ ಸದಸ್ಯ ಗುರು ಮೆಟಗುಡ್ಡ ಮೆಟಗುಡ್ಡ ನೇತೃತ್ವದಲ್ಲಿ ಮುಸ್ಲಿಂ ಬಾಂದವರ ಭವ್ಯ ಮೆರವಣಿಗೆ ಮೇಲೆ ಪುಷ್ಪಮಳೆ ಸುರಿಸಿದರು. 

  ಮೌಲಾನಾ ಸಮೀರಅಹ್ಮದ ಮಾತನಾಡಿ, ರಂಜಾನ್ ಹಬ್ಬ ಅತ್ಯಂತ ಪವಿತ್ರ ಹಬ್ಬವಾಗಿದೆ. ಈ ಹಬ್ಬದಲ್ಲಿ ದಾನ, ಧರ್ಮ ಮಾಡುವುದರ ಜೊತೆಗೆ ದೇಶದಲ್ಲಿ, ನಾಡಿನಲ್ಲಿ ಕಾಲಕ್ಕೆ ತಕ್ಕಂತೆ ಮಳೆ, ಬೆಳೆ, ಗಡಿ ಕಾಯುವ ಯೋಧರಿಗೆ ಶಕ್ತಿ, ಸಾಮರ್ಥ್ಯ, ಸಮಾಜದಲ್ಲಿ ಸುಖಶಾಂತಿ, ನೆಮ್ಮದಿ ನೆಲೆಸಲಿ. ಸುಭದ್ರ ದೇಶ, ಸದೃಢ ಸಮಾಜ ನಿರ್ಮಾಣವಾಗಲಿ’ ಎಂದು ಪ್ರಾರ್ಥಿಸಿದರು. ಮೌಲಾನಾ  ಮುಫೀಜ್ ಅಲಿ ಇಸ್ಲಾಂ, ಮೌಲಾನಾ ಹಫೀಜ್ ಮೈನುದ್ದೀನ ಪ್ರಾರ್ಥಿಸಿದರು.  

   ಸಮಾಜದ ಮುಖಂಡರುಗಳಾದ ಜಿ.ಡಿ.ಬಾಗವಾನ, ಪ್ರೊ.ಎಂ.ಎಂ.ನೇಗಿನಹಾಳ, ಕೆ.ಐ.ಪಾಟೀಲ, ಬುಡ್ಡೇಸಾಬ ಶಿರಸಂಗಿ, ವಕೀಲ ಝಡ್‌.ಎ.ಗೋಕಾಕ, ಡಾ.ಐಜಾಜ್ ಬಾಗೇವಾಡಿ, ಮಹ್ಮದಷಾ ನದಾಫ, ಅಬ್ದುಲ್ ರೆಹಮಾನ ಹುಬ್ಬಳ್ಳಿ, ಮಹ್ಮದಶಪೀ ಅಂಕಲಗಿ,  ಆರ್‌.ಎ.ಅರಭಾಂವಿ, ಅಕ್ತರ ತಾಳಿಕೋಟಿ, ಬಾಬುಸಾಬ ಸಂಗೊಳ್ಳಿ, ಎ.ಎಂ.ಲೋದಿ, ಆಸೀಫ್ ಗೋವೆ, ಬಾಬುಸಾಬ ಸುತಗಟ್ಟಿ, ಅನ್ವರ ಲಂಗೋಟಿ, ಆಶೀಫ್ ಗೋವೆ, ಹಸನ್ ಗೊರವನಕೊಳ್ಳ, ಆರ್‌.ಎಫ್‌.ಮಾಗಿ, ಕೆ.ಐ.ಮುಲ್ಲಾ, ಫಕ್ರುಸಾಬ ದೇವಲಾಪೂರ, ಬಾಬುಸಾಬ ಸಂಗೊಳ್ಳಿ, ನಿಸ್ಸಾರಅಹ್ಮದ ತಿಗಡಿ,  ರಿಯಾಜ್ ನದಾಫ, ರಿಯಾಝ್ ಬಡೇಘರ, ಯುನುಸ್ ಬಡೇಘರ, ಮಲ್ಲಿಕ್ ಮುಲ್ಲಾ ಹಾಗೂ ಅನೇಕರು ಇದ್ದರು.  

    ಪ್ರಾರ್ಥನೆ ಮುಗಿದ ಬಳಿಕ ಹಿಂದೂ, ಮುಸ್ಲಿಂ ಸಮಾಜ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.  

    ಮಕ್ಕಳು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು.  

ಫೋಟೊ ಕ್ಯಾಪ್ಸನ:ಎಚ್3-ಬಿಎಲ್‌ಎಚ್1ಬಿ 

ಬಬೈಲಹೊಂಗಲದಲ್ಲಿ ರಂಜಾನ ಹಬ್ಬದಂದು ಮುಸ್ಲಿಂ ಸಮಾಜದ ಮಕ್ಕಳು ಈದ್ಗಾ ಮೈದಾನದಲ್ಲಿ ಹೊಸಭಟ್ಟೆ ತೊಟ್ಟು ಮಂಗಳವಾರ ಸಂಭ್ರಮಿಸಿದರು. 


ಸುದ್ದಿ ಓದಿ