ಹೆಣ್ಣು ಮಕ್ಕಳೆಂದರೆ ಸಾಕ್ಷಾತ್ ಮಹಾಂಕಾಳಿಯ ಸ್ವರೂಪ : ರಾಮಚಂದ್ರ ಶ್ರೀ
ಸಿಂದಗಿ22: ಹೆಣ್ಣು ಮಕ್ಕಳೆಂದರೆ ಸಾಕ್ಷಾತ್ ಮಹಾಂಕಾಳಿಯ ಸ್ವರೂಪ ಎಂದು ಸ್ಥಳೀಯ ರಾಮಚಂದ್ರ ಮಹಾಸ್ವಾಮಿ ಮುಝಾವದಮಠ ಹೇಳಿದರು.
ಇತ್ತೀಚಿಗೆ ಪಟ್ಟಣದ ಕಾಳಿಕಾದೇವಿ ಜಾತ್ರಾ ಮಹೋತ್ಸವದಲ್ಲಿ ಚಿಕ್ಕಮಕ್ಕಳಿಗೆ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮದಲ್ಲಿ ಕುಮಾರಿ ಅಸ್ಮೀತಾಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಹೆಣ್ಣುಮಗುವೆಂದು. ತಾತ್ಸಾರ ಮಾಡಬೇಡಿ. ಜಗತ್ತಿಗೆ ದಾರಿ ದೀಪವನ್ನು ತೋರುವ ಜಗ್ನಮಾತೆ ಹೆಣ್ಣು ದೇವತೆ. ಮಗುವನ್ನು ದೇವತೆ ರೂಪದಲ್ಲಿ ಕಾಣಿ ಎಂದರು.
ಇದೇ ಸಂದರ್ಭಲ್ಲಿ ನಾಗಠಾಣದ ಮಹಾಬಲೇಶ್ವರ ಶ್ರೀಗಳು ಮಾತನಾಡಿ ಹರ ಮುನಿದರೆ ಗುರುಕಾಯುವನು ಎಂದವರು ನಾವುಗಳು ಪ್ರಥಮದಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ಅಂದಾಗ ಮಾತ್ರ ನಾವು ಮಾಡಿದ ಕೆಲಸಗಳು ಸಪಲವಾಗುತ್ತವೆ ಎಂದರು.
ಬಾಗೀರತಿ ಬಡಿಗೇರರವರ ಮಾರ್ಗರ್ದಶನದಲ್ಲಿ ನೃತ್ಯ ಕಾರ್ಯಕ್ರಮಗಳು ಜರುಗಿದವು.
ಜಯಶ್ರೀ ಬಡಿಗೇರ. ಸುಹಾಸಿನಿ ಹಂಚನಾಳ, ಸುನಿತಾ ಹಂಚನಾಳ, ವೀಣಾ ಬಡಿಗೇರ, ಪವಿತ್ರಾ ಹಿರೇಮಠ, ಪ್ರೇಮಲತಾ ಪತ್ತಾರ, ಗಾಯಿತ್ರಿ ಮಠದ, ಸುಮಾ ಬಡಿಗೇರ, ನವ್ಯಾರಾಣಿ ಬಡಿಗೇರ ಸೇರಿದಂತೆ ಅನೇಕ ಕಾರ್ಯಕರ್ತೆಯರು ಭಾಗವಹಿಸಿದ್ದರು.