ಭಾರತೀಯ ಹಬ್ಬಗಳಲ್ಲಿ ಭಾವನಾತ್ಮಕತೆಗೆ ಮನ್ನಣೆ : ಭಾಗ್ಯಾ ಉದ್ನೂರ
ಗುಳೇದಗುಡ್ಡ 26: ಭಾರತೀಯ ಹಿಂದೂ ಹಬ್ಬಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಭಾವನಾತ್ಮಕ ಪರಂಪರೆಗೆ ನಾವೆಲ್ಲ ಗೌರವ ನೀಡಬೇಕು. ಯಾಕೆಂದರೆ ಅದರಲ್ಲಿ ಭಾವನಾತ್ಮಕ ಸಂಬಂಧವಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷೆ ಭಾಗ್ಯಾ ಉದ್ನೂರ ಹೇಳಿದರು.
ಗುರುವಾರ ಅವರು ಪಟ್ಟಣದ ಪೊಲೀಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಇವರುಗಳಿಗೆ ರಕ್ಷಾ ಬಂಧನ ಮಾಡಿ ಮಾತನಾಡಿ, ನಮ್ಮ ಪರಂಪರೆಯಲ್ಲಿ ಭಾವನಾತ್ಮಕ ಸಂಬಂಧಗಳಿವೆ. ಜಾತಿ,ಮತ,ಧರ್ಮ ಎಲ್ಲವನ್ನೂ ಮೀರಿದ ಈ ಸಂಬಂಧಗಳು ನಮ್ಮನ್ನು ಸಹೋದರತ್ವದಲ್ಲಿ ಬದುಕುವಂತೆ ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಪಿಎಸೈ ಪುಂಡಲೀಕ ಪಟಾತರ, ಹಣಮಂತ ಭೋವಿ, ಎಸ್.ಐ.ಡಂಗೀ, ಎಂ.ಪಿ.ಕುಂದರಗಿ, ಆರ್.ಹೆಚ್. ನಡುವಿನಮನಿ, ತಾಲೂಕು ಬಿಜೆಪಿ ಪೆರೆಂಟ್ ಸಮಿತಿಯ ಸಾವಿತ್ರಿ ಜೋಗೂರ, ಸವಿತಾ ಉಂಕಿ, ರತ್ನಾ ಹಿಪ್ಪರಗಿ, ಗೀತಾ ಶಂಕ್ರ್ಪ ಜನಿವಾರದ, ಜಯಶ್ರೀ ಹನುಮಂತಪ್ಪ ಗುರಂ, ರೂಪಾ ಹಾನಾಪೂರ, ಭುವನೇಶ್ವರಿ ಶಿರೂರ, ಶಂಕ್ರಮ್ಮ ವಸಂತ ಮೇಡಿ, ಸೀತಬಾಯಿ ಚಂದ್ರಶೇಖರ ಮಂಕಣಿ, ರತ್ನವ್ವ ಈರ್ಪ ತಿಪ್ಪಾ ಸೇರಿದಂತೆ ಇತರರು ಇದ್ದರು.