ಕಾಗವಾಡ

ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ: ಬುರ್ಲಿ

ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ: ಬುರ್ಲಿ

ಲೋಕದರ್ಶನ ವರದಿ

ಶೇಡಬಾಳ 21: ತಾಲೂಕಿನಲ್ಲಿ ಮತ್ತು ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನ.1 ರಂದು ಆಚರಿಸಲು ತಾಲೂಕು ಆಡಳಿತ ನಿರ್ಧರಿಸಿದೆ. ಎಂದು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ರಾಜೇಶ್ ಬುರ್ಲಿ ಹೇಳಿದ್ದಾರೆ.

ಅವರು ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಅ.19 ರಂದು ಕನ್ನಡ ರಾಜೋತ್ಸವ ಆಚರಣೆ ಕುರಿತು ಪೂರ್ವ ಸಿದ್ಧತೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನ.1 ರಂದು ಬೆಳಗ್ಗೆ ತಾಲೂಕಿನ ಗಡಿಗ್ರಾಮ ಮಂಗಸೂಳಿಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಿ, ಗಡಿಭಾಗದ ಮಹಾದ್ವಾರದ ಮೇಲೆ ಕನ್ನಡದ ಧ್ವಜಾರೋಹಣ ಮಾಡಲಾಗುವುದು.

ನಂತರ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜೆ, ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಕರವೇ ತಾಲೂಕಾ ಅಧ್ಯಕ್ಷ ಸಿದ್ದು ವಡೇಯರ ಮೆರವಣಿಗೆಯಲ್ಲಿ ನಾಡಿನ ಸಾಹಿತ್ಯ, ಇತಿಹಾಸ, ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧ್ದ ಚಿತ್ರ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳನ್ನು ಆಹ್ವಾನಿಸುವಂತೆ ಸಂಬಂಧಿಸಿದ ಇಲಾಖೆಗೆ ತಿಳಿಸಿದರು. ಈ ವೇಳೆ ಕಾಗವಾಡ ಪಿಎಸ್ಐ ಹನಮಂತ ನರಳೆ, ಬಿಇಓ ಎಂ.ಆರ್. ಮುಂಜೆ, ಗ್ರೇಡ್ 2 ತಹಶೀಲ್ದಾರ್ ರಾಕೇಶ ಬುವಾ, ಸಿಡಿಪಿಓ ಸಂಜಯಕುಮಾರ ಸದಲಗಿ, ಶಿವಾನಂದ ನವಿನ್ಯಾಳೆ, ದತ್ತಾ ಪೂಜಾರಿ, ಕೃಷ್ಣಾ ಧೋಂಡಾರೆ, ಪ್ರವೀಣ ಪಾಟೀಲ, ಸಂಜು ಕರವ, ಪ್ರಕಾಶ ಮಿರ್ಜಿ , ಫಾರೂಖ ಅಲಾಸ್ಕರ, ಅಸ್ಲಂ ಜಮಾದಾರ, ಮಹಾಂತೇಶ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಸುದ್ದಿ ಓದಿ