ಕಾಗವಾಡ

ಉಗಾರ ಬುದ್ರುಕನಲ್ಲಿ ಸಂಭ್ರಮದ ರಾಜ್ಯೋತ್ಸವ

ಉಗಾರ ಬುದ್ರುಕನಲ್ಲಿ ಸಂಭ್ರಮದ ರಾಜ್ಯೋತ್ಸವ

ಶೇಡಬಾಳ 04: ಉಗಾರ ಬುದ್ರುಕ ಗ್ರಾಮದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

ಉಗಾರ ಬುದ್ರುಕ ಗ್ರಾಮದ ಜೈ ಜಿನೇಂದ್ರ ಏಜ್ಯುಕೇಶನ್ ಟ್ರಸ್ಟ್‌ನ ಕನ್ನಡ ಮಾಧ್ಯಮ ಶಿಶು ವಿಹಾರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜರುಗಿದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪೂಜೆ, ಧ್ವಜಾರೋಹಣ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.  

ವಾದ್ಯ ವೈಭವದೊಂದಿಗೆ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಕರ್ನಾಟಕದ ಹಲವಾರು ಮಹನೀಯರ ವೇಷಭೂಷಣಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಜನಮನ ಸೆಳೆದರು. 

ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯೆಂದರೆ  ಕರ್ನಾಟಕ ರತ್ನ ಪ್ರಶಸ್ತಿ ವಿಜೇತರಾದ ದಿವಂಗತರಾದ ಪುನೀತ ರಾಜಕುಮಾರ ಅವರ ಗಂಧದ ಗುಡಿ ಚಿತ್ರದ ರೂಪಕ ಗ್ರಾಮಸ್ಥರ ಗಮನ ಸೆಳೆಯಿತು.  

ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸುವಾಗ ಗ್ರಾಮ ದೇವತೆ ಪದ್ಮಾವತಿ ದೇವಿ ಮಂದಿರಕ್ಕೆ ಬಂದಾಗ ಮಂದಿರದ ಧರ್ಮದರ್ಶಿಗಳಾದ ಶೀತಲಗೌಡ ಪಾಟೀಲರು ಹಾಗೂ ಮಹಾದೇವ ಗಲ್ಲಿಗೆ ಬಂದಾಗ ಶಿವಕೃಪಾ ಕ್ಲಾಥ ಸ್ಟೋರ್‌ನ ಮಾಲೀಕ ಪ್ರಕಾಶ ಕುಂಬಾರ ಅವರು ಪುನೀತ ರಾಜಕುಮಾರ ಅವರ ಕಟೌಟಗೆ ಹಾಲಿನ ಅಭಿಷೇಕ ಮಾಡಿ ತಮ್ಮ ಗೌರವ ಸಲ್ಲಿಸಿದರು. 

ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕಿ ಶಾಂತಾ ಸತ್ತಿಯವರು ಮಾತನಾಡಿ ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲಿದೆಂದು ಹೇಳಿದರು. 

ಪುನೀತರಾಜಕುಮಾರ ಹಾಗೂ ಇನ್ನಿತರ ರೂಪಕಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯವರಿಗೆ ಶಿಕ್ಷಕರಿಗೆ ಗ್ರಾಮಸ್ಥರು ಅಭಿನಂದನೆಗಳ ಸುರಿಮಳೆಗೈದರು. 

ಸಂಸ್ಥೆಯ ಕಾರ್ಯದರ್ಶಿ ರಾವಸಾಹೇಬ ಸಾಜನೆ, ಆಡಳಿತ ಮಂಡಳಿಯ ಸದಸ್ಯರುಗಳಾದ ಅರುಣ ಖುರ​‍್ೆ, ಪ್ರಕಾಶ ಸಾಜನೆ, ಬ್ರಿಜೆಶ ಮಗದುಮ, ಮಹಾವೀರ ಸಮಾಜ, ಸಂಸ್ಥೆಯ ಹಿತೈಷಿಗಳಾದ ಬಾಬು ಪಾಟೀಲ, ನಾಯಕ ಸೇರಿದಂತೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಇದ್ದರು. 


ಸುದ್ದಿ ಓದಿ