ಧಾರವಾಡ - ಹುಬ್ಬಳ್ಳಿ

ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ

ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ

ಹುಬ್ಬಳ್ಳಿ 11: ಇಲ್ಲಿಯ ಬೆಂಗೇರಿ ಸೆಂಟ್ರಲ್ ಸಂತೆ ಮೈದಾನದಲ್ಲಿ ‘ಪವರ ಆಫ್ ಯೂಥ್ಸ ಫೌಂಡೇಶನ್‌’ ಅವರು ಹಮ್ಮಿಕೊಂಡಿದ್ದ "ಕನ್ನಡ ರಾಜ್ಯೋತ್ಸವ ನಾಡಹಬ್ಬ" ಕಾರ್ಯಕ್ರಮವು ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು.   

ಸಮಾಜ ಸೇವಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  

ಕಾರ್ಯಕ್ರಮದ ಉದ್ಘಾಟನೆಯನ್ನು ಡಾಽಽ ವಿ.ಎಸ್‌.ಪ್ರಸಾದ ನೆರವೇರಿಸಿದರು. ಕಾರ್ಯಕ್ರಮದ ಬಗ್ಗೆ ಮಾತನಾಡುತ್ತ ಫೌಂಡೇಶನ್ನನ ಸಮಾಜಮುಖಿ ಕಾರ್ಯಗಳ ಬಗ್ಗೆ ಅಭಿನಂದನೆ ತಿಳಿಸಿದರು. ರವಿಚಂದ್ರ ದೊಡ್ಡಿಹಾಳರವರ ‘ನಾ ಕಂಡ ಶತಮಾನದ ಸಂತರು’ ಪುಸ್ತಕವನ್ನು ಅಕ್ಷರ ತಾಯಿ, ದತ್ತಿ ದಾನಿ, ಸುವರ್ಣ ಮಹೋತ್ಸವ ಪುರಸ್ಕೃತರು ಲೂಸಿ ಸಾಲ್ಡಾನರವರು ಬಿಡುಗಡೆ ಮಾಡಿದರು.  

ಕಾರ್ಯಕ್ರಮದಲ್ಲಿ ಸಂಕಲ್ಪ ಶೆಟ್ಟರ, ಸತೀಶ ಮೆಹರವಾಡೆ, ಮಾರುತಿ ಬೀಳಗಿ, ಹೂವಪ್ಪ ದಾಯಗೋಡಿ, ರಮೇಶ. ಮಹದೆವಪ್ಪನವರ, ಸಂತೋಷ ವರ್ಣೆಕರ, ರಾಜು ಕಾಳೆ, ಸದಾಶಿವ ಚೌಶೆಟ್ಟಿ, ಅಶೋಕ ವಾಲ್ಮೀಕಿ, ಮಲ್ಲಿಕಾರ್ಜುನ ತೊದಲಬಾಗಿ, ಬಿ.ಎಸ್‌.ಪುಷ್ಪ ಹಾಗೂ ಫೌಂಡೇಶನ್ನಿನ ಎಲ್ಲ ಸದಸ್ಯರು ಮತ್ತು ಊರಿನ ಸಂಘ ಸಂಸ್ಥೆಗಳವರು ಭಾಗವಹಿಸಿದ್ದರು. ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಸನ್ಮಾನಿಸಲಾಯಿತು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೌಂಡೇಶನ್ನನ ಗೌರವಾಧ್ಯಕ್ಷರಾದ ಎಲ್‌.ಐ.ಲಕ್ಕಮ್ಮನವರ ವಹಿಸಿದ್ದರು. 


ಸುದ್ದಿ ಓದಿ