ಜಿಲ್ಲಾ ಉಪಾಧ್ಯಕ್ಷರಾಗಿ ರಾಜು ಸಂಗಮ ನೇಮಕ
ಗುಳೇದಗುಡ್ಡ, ಸೆಪ್ಟೆಂಬರ್ 13: ಕಾಂಗ್ರೇಸ್ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸುವ ಕಾರ್ಯವನ್ನು ಗುರುತಿಸಿ ಪಕ್ಷದ ಹಿರಿಯ ನಾಯಕರ ಮತ್ತು ವರಿಷ್ಠರ ಶಿಫಾರಸ್ಸಿನ ಮೇರೆಗೆ ಗುಳೇದಗುಡ್ಡದ ಕಾಂಗ್ರೇಸ್ ಯುವಕಾರ್ಯಕರ್ತ ರಾಜು ಸಂಗಮ ಅವರನ್ನು ಬಾಗಲಕೋಟ ಜಿಲ್ಲಾ ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಪಕ್ಷದ ತತ್ವ ಸಿದ್ದಾಂತಗಳನ್ನು ಎತ್ತಿ ಹಿಡಿದು ಪಕ್ಷದ ಜನಪ್ರಿಯ ಕಾರ್ಯಕ್ರಮಗಳನ್ನು ಮತ್ತು ಸಕರ್ಾರದ ವೈಫಲ್ಯಗಳನ್ನು ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನಮುಟ್ಟುವಂತೆ ಕಾರ್ಯ ನಿರ್ವಹಿಸಬೇಕೆಂದು ಸಾಮಾಜಿಕ ಜಾಲತಾಣ ಸಮಿತಿಯ ಜಿಲ್ಲಾಧ್ಯಕ್ಷ ಎಸ್.ಬಿ.ಬಗಲಿದೇಸಾಯಿ, ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಆದೇಶದಲ್ಲಿ ತಿಳಿಸಿದ್ದಾರೆ.