ಮನರಂಜನೆ

ಸುಪ್ರೀಂ ಆದೇಶಕ್ಕೆ ರಜಪೂತ್ ಕುಟುಂಬ, ಬಾಲಿವುಡ್ ನಟರ ಸ್ವಾಗತ

ಸುಪ್ರೀಂ ಆದೇಶಕ್ಕೆ ರಜಪೂತ್ ಕುಟುಂಬ, ಬಾಲಿವುಡ್ ನಟರ ಸ್ವಾಗತ
ಪ್ರಾತಿನಿಧ್ಯ ಉದ್ದೇಶಕ್ಕಾಗಿ ಮಾತ್ರ ಚಿತ್ರ

ನವದೆಹಲಿ, ಆಗಸ್ಟ್19: ಮಹತ್ವದ ಬೆಳವಣಿಗೆಯಲ್ಲಿ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸುವಂತೆ ಸುಪ್ರೀಂ ಕೋರ್ಟ್ ಮಾಡಿದ ಆದೇಶವನ್ನು ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ಸ್ವಾಗತಿಸಿದ್ದಾರೆ. ಇದು ಐತಿಹಾಸಿಕ ತೀರ್ಪು, ನ್ಯಾಯದ ಪರವಾಗಿರುವ ತೀರ್ಪು. ಮುಂದಿನ ದಿನಗಳಲ್ಲಿ ಸುಶಾಂತ್ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂಬ ವಿಶ್ವಾೀಸ ವ್ಯಕ್ತಪಡಿಸಿದ್ದಾರೆ ಅಭಿಪ್ರಾಯಪಟ್ಟರು. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ ಸಾಮಾಜ ಜಾಲತಾಣದಲಲ್ಇ ಬಹಳ ಪ್ರತಿಕ್ರಿಯೆ ವ್ಯಕ್ತವಾಗಿ . ಸುಶಾಂತ್ ಸೋದರಿ ಮೀತು ಸಿಂಗ್, ನಟಿ ಅಂಕಿಯಾ ಲೋಖಂಡೆ, ಕಂಗನ ರಾವತ್ ಸೇರಿದಂತೆ ಹಲವು ಮಂದಿ ಇಂದಿನ ತೀರ್ಪು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ. ಇದು ಆತ್ಮಹತ್ಯೆಯಲ್ಲ ಕೊಲೆ, ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಸಂಸದ ಸುಬ್ರಮಣ್ಯಸ್ವಾಮಿ ಬಹಳ ಒತ್ತಡ ಹಾಕಿದ್ದರು. ಶಿವಸೇನೆ ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಸುದ್ದಿ ಓದಿ