ಗಡಿ ತಾಲೂಕಿನಲ್ಲಿ ಅದ್ದೂರಿ ರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ
ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ರಾಜೇಶ ಬುರ್ಲಿ
ಕಾಗವಾಡ 15: ಸರ್ಕಾರ ಆದೇಶದ ಮೇರೆಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನವಬಂರ್ 1 ರಂದು ಕರ್ನಾಟಕದ ರಾಜ್ಯೋತ್ಸವವನ್ನು ಸಡಗೆ ಸಂಭ್ರಮದಿಂದ ಆಚರಿಸಲಾಗುವುದೆಂದು ತಹಶೀಲ್ದಾರ್ ರಾಜೇಶ ಬುರ್ಲಿ ತಿಳಿಸಿದ್ದಾರೆ.
ಅವರು, ಮಂಗಳವಾರ ದಿ. 15 ರಂದು ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಪೂರ್ವಿಭಾವಿ ಸಬೆಯ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ಈ ವರ್ಷ ಅತೀ ವಿಜ್ರಂಭಣೆಯಿಂದ ಎಲ್ಲ ಕನ್ನಡ ಸಂಘಟನೆ ಸಹಯೋಗದೊಂದಿಗೆ ಅದ್ದೂರಿವಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುವುದು. ಪಟ್ಟಣದ ಎಲ್ಲ ಹಿರಿಯರು ಹಾಗೂ ಕನ್ನಡ ಅಭಿಮಾನಿ ಬಂಧುಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾಗವಾಡ ಪೋಲಿಸ್ ಠಾಣೆಯ ಸಿಬ್ಬಂದಿಯವರು ಸಹಕಾರ ನೀಡಲಿದ್ದಾರೆಂದು ಅವರು ತಿಳಿಸಿದರು. ಪಿಎಸ್ಐ ಜಿ.ಜಿ. ಬಿರಾದರ ಮಾತನಾಡಿ, ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದರೊಂದಿಗೆ, ಶಾಂತಿ, ಸುವವ್ಯಸ್ಥೆ ಕಾಪಾಡುವ ಕುರಿತು ಮಾರ್ಗದರ್ಶನ ಮಾಡಿದರು.
ಪಿಎಸ್ಐ ಜಿ.ಜಿ. ಬಿರಾದರ, ತಾ.ಪಂ. ಎಇಓ ಸುರೇಶ ಕದ್ದು, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಕೃಷಿ ಇಲಾಖೆಯ ಅಧಿಕಾರಿಕಾಂತಿನಾಥ ಬಿರಾದಾರ, ಹೆಸ್ಮಾಂ ಎಇಇ ಡಿ.ಎ. ಮಾಳಿ, ಚಿಕ್ಕೋಡಿ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಪ್ರಶಾಂತ ಗಂಗಧರ, ರಾಜು ಬಡಚಿ, ಅಬಕಾರಿ ಇಲಾಖೆಯ ಅಧಿಕಾರಿ ಮಹಾಂತೇಶ ಬಂಡಗಾರ, ಕರವೇ ಅಧ್ಯಕ್ಷ ಸಿದ್ದು ಒಡಿಯರ, ಉಪಾಧ್ಯಕ್ಷ ಗಣೇಶ ಕೊಳೇಕರ, ಕಾಕಾ ಪಾಟೀಲ, ಅರುಣ ಜೋಶಿ, ವಿದ್ಯಾಧರ ಧೊಂಡಾರೆ, ಪ್ರವೀಣ ಪಾಟೀಲ, ಫಾರೂಕ್ ಅಲಾಸ್ಕರ, ರಾಜು ಪಾಟೀಲ, ಜಾವೀದ ಮುಜಾವರ, ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.