ರಾಜರಾಜೇಶ್ವರಿ ಕಾಲೇಜು ರಾಷ್ಟ್ರೀಯ ಸೇವಾ ದಿನಾಚರಣೆ
ರಾಣೆಬೆನ್ನೂರು 26: ಗ್ರಾಮೀಣ ಸಂಸ್ಕೃತಿ ಬಹುದೊಡ್ಡ ಸಂಸ್ಕೃತಿ, ಗ್ರಾಮೀಣರ ಬದುಕಿನ ನೈಜ ಸಂಸ್ಕೃತಿಯನ್ನು ಅರಿಯಬೇಕಾದರೆ, ಸರಕಾರಗಳು ಜಾರಿಗೆ ತಂದಿರುವ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಗ್ರಾಮ ಸಂಸ್ಕೃತಿಯನ್ನೂ ಅರಿಯಲು ಅತ್ಯಂತ ಸಹಾಯಕಾರಿಯಾಗಿದೆ ಎಂದು ಉಪನ್ಯಾಸಕಿ ರಜನಿ ಲಿಂಗನಗೌಡರ ಹೇಳಿದರು. ಅವರು ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ, ರಾಜರಾಜೇಶ್ವರಿ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲದಲ್ಲಿ ನಡೆದ ರಾಷ್ಟ್ರೀಯ ಸೇವಾ ದಿನಾಚರಣೆ ಕಾರ್ಯಕ್ರಮ, ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಸಮಾನತೆ, ಪ್ರಗತಿ ಸಾಧಿಸಲು, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ನಿರೂಪಿಸಿ ಕೊಳ್ಳಲು ಹಾಗೂ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಎನ್ಎಸ್ಎಸ್ ಬಹು ಸಹಕಾರಿಯಾಗಿದೆ ಎಂದರು.
ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರದ ಭವಿಷ್ಯ ವಿಷಯ ಕುರಿತು, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ವೀರೇಶ್ ಕುರಹಟ್ಟಿ ಅವರು ಉಪನ್ಯಾಸ ನೀಡಿದರು. ಇನ್ನೋರ್ವ ಯೋಜನಾಧಿಕಾರಿ, ಡಾ: ಕವಿತಾ ಗಡ್ಡದಗೂಳಿ ಅವರು ರಾಷ್ಟ್ರ ನಿರ್ಮಾಣದಲ್ಲಿ ಯುವ ಸಮುದಾಯದ ಪಾತ್ರ ವಿಷಯವಾಗಿ ಮಾತನಾಡಿದರು. ಕಾಲೇಜು ಪ್ರಾಚಾರ್ಯ,ನಾರಾಯಣ ನಾಯಕ ಎ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು, ಶಿಕ್ಷಕರು ಪ್ರಾಧ್ಯಾಪಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು ಮಹಾಲಕ್ಷ್ಮಿ ದಲಬಂಜನ್ ಪ್ರಾರ್ಥಿಸಿದರು. ಸೃಷ್ಟಿಕ ತಂಬೂರಿ ಸ್ವಾಗತಿಸಿದರು. ಅಶ್ವಿನಿ ಪುರದ ಎನ್ಎಸ್ಎಸ್ ಗೀತೆ ಹಾಡಿದರು. ನೇತ್ರಾ ಮಲಗೌಡ್ರ, ಕಾವೇರಿ ಮಣಕೂರು ನಿರೂಪಿಸಿದರು. ಪ್ರಿಯಾ ಪುಟ್ಟಣ್ಣಗೌಡ್ರ ವಂದಿಸಿದರು.