ರಾಜರಾಜೇಶ್ವರಿ ಕಾಲೇಜು: ಅಂತರ ಮಹಾವಿದ್ಯಾಲಯಗಳ ಕಾರ್ಯಾಗಾರ
ರಾಣೇಬೆನ್ನೂರು 03: ಸಮಾಜ ವ್ಯವಸ್ಥೆಯಲ್ಲಿ ಸಾಂಘಿಕವಾಗಿ ಬೆಳೆಯಬೇಕಾಗುತ್ತದೆ ಅದಕ್ಕೆ ಸಮಾಜಶಾಸ್ತ್ರ ವಿಷಯವಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದರ ಮೂಲಕ ಭವಿಷ್ಯದ ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಪರಿಕಲ್ಪನೆ ಮೂಡಿಸುತ್ತಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ್. ಎ, ಹೇಳಿದರು.
ಕಾಲೇಜು ಸಭಾಭವನದಲ್ಲಿ ಆಯೋಜಿಸಲಾಗಿದ್ದ ಅಂತರ ಮಹಾವಿದ್ಯಾಲಯಗಳ ಸಮಾಜಶಾಸ್ತ್ರ ವಿಭಾಗದ ಕಾರ್ಯಗಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜ ಸೇವೆಗೆ ಸಮಗ್ರಗಬೇಕಾದರೆ ಸಮಗ್ರ ತರಬೇತಿ ಪಡೆಯುವುದು ಜೊತೆಗೆ ಪ್ರಾತ್ಯಕ್ಷಿಕೆಯನ್ನು ಹೊಂದಬೇಕಾದ ಅಗತ್ಯವಿದೆ ಎಂದರು.ತಾಲೂಕ ಪಂಚಾಯತ್ ಐ ಇ ಸಿ ಸಹ ಸಂಯೋಜಕ ಡಿ.ಬಿ.ಅಂಗೂರ್ ಅವರು, ಪಂಚಾಯತ್ ರಾಜ್ ವ್ಯವಸ್ಥೆಯ ಸಂವಿಧಾನದ 73ನೇ ತಿದ್ದುಪಡಿಯ ಕಾರ್ಯಗಳ ಕುರಿತು ಉಪನ್ಯಾಸ ನೀಡಿದರು.
ಧಾರವಾಡ ಕವಿವಿ ಎಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕ ರವಿ ಲಿಂಗನಗೌಡ್ರ ಅವರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಯ ಮಹತ್ವ. ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಮಾಹಿತಿ ಕುರಿತಂತೆ ಬುಡಪನಹಳ್ಳಿಯ ಪರಶುರಾಮ್ ಆಗಸನಹಳ್ಳಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ದೇವರಾಜ್ ಸಣ್ಣ ಕರಿಗಾರ ಅವರು ವಿವಿಧ ವಿಷಯಗಳ ಕುರಿತು ಸಾಧ್ಯಂತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ, ಎಂ. ಎನ್. ಸೂರಣಿಗಿ, ಶೋಭಾ ದೊಡ್ಡನಾಗಳ್ಳಿ, ಸೇರಿದಂತೆ, ವಿವಿಧ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು. ಲಕ್ಷ್ಮಿ ಲಮಾಣಿ ಪ್ರಾರ್ಥಿಸಿದರು, ರತ್ನವ್ವ ಹಾದಿಮನಿ, ಸ್ವಾಗತಿಸಿದರು ಪ್ರಿಯಾ ಕಾಗಿನೆಲೆ ನಿರೂಪಿಸಿದರು ದೇವಿಕಾ ವಿ.ಪಿ, ವಂದಿಸಿದರು.