ಇಂಡಿ

ಜ.12ರ ಒಳಗಾಗಿ ಬೂತ ಮಟ್ಟದಲ್ಲಿ ಬಿಜೆಪಿ ಧ್ವಜ ಹಾರಿಸಿ: ಸಚಿವ ಪೂಜಾರಿ

ಜ.12ರ ಒಳಗಾಗಿ ಬೂತ ಮಟ್ಟದಲ್ಲಿ ಬಿಜೆಪಿ ಧ್ವಜ ಹಾರಿಸಿ: ಸಚಿವ ಪೂಜಾರಿ

ಇಂಡಿ: ವಿಧಾನಸಭಾ ಚುನಾವಣೆಗೆ ಮತಗಟ್ಟೆ ಹಂತದಲ್ಲಿ ಬಿಜೆಪಿ ಪಕ್ಷವನ್ನು ಸಜ್ಜುಗೊಳಿಸುದಕ್ಕಾಗಿ ಬೂತಗಳಲ್ಲಿ ಕಾರ‌್ಯಕರ್ತರು ಸರಿಯಾಗಿರಬೇಕು. ಭೂತಗಳನ್ನು ಗಟ್ಟಿಗೊಳಿಸಬೇಕು. ಜ.12ರ ಒಳಗಾಗಿ ಬೂತ ಮಟ್ಟದಲ್ಲಿ ಬಿಜೆಪಿ ಧ್ವಜ ಹಾರಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪಕ್ಷದ ಕಾರ‌್ಯಕರ್ತರಿಗೆ ಕರೆ ನೀಡಿದರು. 

ರವಿವಾರ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಬಿಜೆಪಿ ಮಂಡಲ ವತಿಯಿಂದ ನಡೆದ ಭತಗುಣಕಿ ಮಹಾಶಕ್ತಿ ಕೇಂದ್ರ ಸಮಾವೇಶ ಹಾಗೂ ವಿಜಯ ಬೂತ  ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಸಮೃದ್ಧ ಭಾರತ, ಸ್ವಾಭಿಮಾನಿ ಭಾರತ ನಿರ್ಮಾಣ ಮಾಡಲು ಬಿಜೆಪಿ ಸ್ಥಾಪನೆಯಾಗಿದೆ.  ಜಗತ್ತು ಭಾರತಕ್ಕೆ ಗೌರವಿಸುವಂತೆ ಮಾಡಿದ್ದು ಬಿಜೆಪಿ. ಇಂಥಹ ಪಕ್ಷ ಕಟ್ಟಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್‌.ಕೆ ಅಡ್ವಾಣಿ ಜೀವನಪೂರ್ತಿ ಶ್ರಮಿಸಿದ್ದಾರೆ. ಇಂಥಹ ಭಾರತದ ನಾಯಕ ಪ್ರಧಾನಿ ನರೇಂದ್ರ ಮೋದಿ ಉತ್ತಮವಾದ ಆಡಳಿತ ನೀಡುತ್ತಿದ್ದಾರೆ ಎಂದರು.  

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿ, ಸ್ಥಳಿಯ ಮೂರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯನ್ನು ಉನ್ನತ ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು. 

ವೇದಿಕೆಯಲ್ಲಿ ಮಲ್ಲಿಕಾರ್ಜುನ ಕಿವಡೆ, ಕಾಸುಗೌಡ ಬಿರಾದಾರ, ಸುರೇಶ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ರಾಜಕುಮಾರ ಸಗಾಯಿ, ಚಿದಾನಂದ ಛಲವಾದಿ, ಶೀಲವಂತ ಉಮರಾಣಿ, ಎಸ್‌.ಎ. ಪಾಟೀಲ, ಗಂಗಾಧರ ಪಾಟೀಲ, ವಿಜಯ ಭೂತ ಅಭಿಯಾನದ ತಾಲ್ಲೂಕು ಉಸ್ತುವಾರಿ ವಿವೇಕ ಡಬ್ಬಿ, ಶ್ರೀಮಂತ ಮೊಗಲಾಯಿ, ಅಶೋಕಗೌಡ ಪಾಟೀಲ, ಡಿ.ಎಸ್‌. ಪಾಟೀಲ, ದೊಡಗೊಂಡಪ್ಪಗೌಡ ಹೊಸಮನಿ,  ವಿಠ್ಠಲ ಬಾಬುಳಗಾಂವ, ಎಂ.ಎಸ್‌. ಮುಜಗೊಂಡ,  ಕಲ್ಲನಗೌಡ ಬಿರಾದಾರ, ಯಶವಂತ ಬಿರಾದಾರ,    ಸುಭಾಸ್ ಲಾಳಸೇರಿ, ಗುಂಡು ಅಜನಾಳ, ಸಿದ್ದು ವಾಲಿ, ಹಣಮಂತ ಲಾಳಸೇರಿ ಸೇರಿದಂತೆ ಅನೇಕ ಬಿಜೆಪಿ ಕಾರ‌್ಯಕರ್ತರು ಇದ್ದರು.  ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಬಿಜೆಪಿ ಮಂಡಲ ವತಿಯಿಂದ ನಡೆದ ಭತಗುಣಕಿ ಮಹಾಶಕ್ತಿ ಕೇಂದ್ರ ಸಮಾವೇಶ ಹಾಗೂ ವಿಜಯಭೂತ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿ ಮಾತನಾಡಿದರು. 


ಸುದ್ದಿ ಓದಿ