ಸಿರುಗುಪ್ಪ

ಪೋಸ್ಟ್‌ ಆಫೀಸಿನಲ್ಲೇ ರೈಲ್ವೆ ಟಿಕೆಟ್ ಬುಕ್ಕಿಂಗ್‌: ಅಬ್ದುಲ್ ನಬಿ

ಪೋಸ್ಟ್‌ ಆಫೀಸಿನಲ್ಲೇ ರೈಲ್ವೆ ಟಿಕೆಟ್ ಬುಕ್ಕಿಂಗ್‌: ಅಬ್ದುಲ್ ನಬಿ

ಸಿರುಗುಪ್ಪ 21: ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ತಮ್ಮ ಹತ್ತಿರದ ಪೋಸ್ಟ್‌ ಆಫೀಸ್‌ಗಳಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಲು ಬಹುದಾಗಿದೆ ಎಂದು ಭಾರತ ಸರ್ಕಾರದ ಇನ್ಫರ್ಮೇಷನ್ ಮತ್ತು ಕಮ್ಯುನಿಕೇಶನ್ ಟೆಕ್ನಾಲಜಿ ಎಂಡಿ ಜಿಎಸ್‌ಜಿಪಿ ಪೋಸ್ಟ್‌ ಫೋರಂ ಸದಸ್ಯರು ಸಮಾಜ ಸುಧಾರಕರು ಎ ಅಬ್ದುಲ್ ನಬಿ ತಿಳಿಸಿದರು. 

ರೈಲು ಪ್ರಯಾಣಿಕರಿಗೆ ತಮ್ಮ ಹತ್ತಿರದಲ್ಲೇ ಟಿಕೇಟ್ ಕಾಯ್ದಿರಿಸಲು ಸಾಧ್ಯ ವಾಗಿಸುವ ನಿಟ್ಟಿನಲ್ಲಿ ದೇಶದಾದ್ಯಂತ 45000 ಅಂಚೆ ಕಚೇರಿಗಳಲ್ಲಿ ರೈಲ್ವೇ ಟಿಕೇಟುಗಳನ್ನು ಪಡೆಯುವ ಸೌಲಭ್ಯವನ್ನು ಆರಂಭಿಸಲಾಗಿದೆ ದೇಶಾದ್ಯಂತ ಒಟ್ಟು 1.50ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ ಈ ಪೈಕಿ 45ಸಾವಿರ ಅಂಚೆ ಕಚೇರಿಗಳಲ್ಲಿ ರೈಲ್ವೆ ಟಿಕೆಟ್ ಪಡೆಯಬಹುದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿ ಸಿದ್ದಾರೆ ರೈಲ್ವೆ ನಿಲ್ದಾಣಗಳಲ್ಲಿ ಗ್ರಾಹಕರ ದಟ್ಟಣೆ ಕಡಿಮೆ ಮಾಡಲು ಇದು ಸಹಕಾರಿ ಯಾಗಲಿದೆ ಎಂದು ಅಬ್ದುಲ್ ನಬಿ ತಿಳಿಸಿದ್ದಾರೆ. 


ಸುದ್ದಿ ಓದಿ