ರಾ್ಯಗಿಂಗ್ ಎಂಬುದು ಅಕ್ಷಮ್ಯ ಅಪರಾಧ
ಧಾರವಾಡ 12: ವಿಶ್ವವಿದ್ಯಾಲಯದ ಆವರಣದಲ್ಲಿ ರಾ್ಯಗಿಂಗ್ ಮಾಡುವುದು ಅಕ್ಷಮ್ಯ ಅಪರಾಧ. ಇದನ್ನು ಮಾಡಿದ ಮತ್ತು ಪ್ರಚೋದಿಸಿದರವರಿಗೆ ಕಾನೂನಿನಲ್ಲಿ ಜಾಮೀನು ರಹಿತ ಬಂಧನ ಶಿಕ್ಷೆ ವಿಧಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ತಿ್ೇರುದ್ರ್ಪ ಜೆ ಹೇಳಿದರು.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸೂಚನೆಯಂತೆ ವಿಶ್ವವಿದ್ಯಾಲಯದ ಆ್ಯಂಟಿ ರಾ್ಯಗಿಂಗ್ ಕೋಶದ ವತಿಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಲ್ಲಿ ರಾ್ಯಗಿಂಗ್ ವಿರುದ್ಧ ಅರಿವು ಮೂಡಿಸಲು ‘ಆ್ಯಂಟಿ ರಾ್ಯಗಿಂಗ್ ವಾರಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾ್ಯಗಿಂಗ್ ಎಂಬ ಪಿಡುಗನ್ನು ತೊಡೆದುಹಾಕಲು ಎಲ್ಲ ವಿದ್ಯಾರ್ಥಿಗಳು ಸೇನಾನಿಗಳಾಗಬೇಕು. ರಾ್ಯಗಿಂಗ್ಗೆ ಒಳಪಡುವ ವ್ಯಕ್ತಿಯಷ್ಟೆ ಅಲ್ಲದೇ ಅದನ್ನು ನೋಡಿರುವ ವಿದ್ಯಾರ್ಥಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯಿಂದ ಘೋಷಿಸಲ್ಪಟ್ಟಿರುವ ಅಂತರಾಷ್ಟ್ರೀಯ ಯುವ ದಿನ (ಆಗಸ್ಟ್ 12) ವನ್ನು ವಿಶ್ವವಿದ್ಯಾಲಯದ ಎನ್ಎಸ್ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ‘ಮಾದಕ ದ್ರವ್ಯ ವ್ಯಸನ ಮುಕ್ತ ಭಾರತ’ ಎಂಬ ಪ್ರತಿಜ್ಞೆಯನ್ನು ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೋಹನ್ ದಾಸ್ ಬೋಧಿಸಿದರು.
ಕುಲಸಚಿವರಾದ ರುದ್ರೇಶ್ ಎಸ್ ಎನ್, ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ. ಗೌರಿ ಮಾಣಿಕ್ ಮಾನಸ, ಕಾನೂನು ನಿಕಾಯದ ಡೀನರಾದ ಡಾ. ಕೃಷ್ಣ ಭಾರದ್ವಾಜ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಮಾರಣ್ಣ, ಪ್ರೊ. ಅರುಣ್ ಕುಮಾರ್ ಲಗಶೆಟ್ಟಿ, ಆ್ಯಂಟಿ ರಾ್ಯಗಿಂಗ್ ಕೋಶದ ಸಂಯೋಜಕರಾದ ಡಾ. ವಿರೇಂದ್ರ ಕುಮಾರ್, ಎನ್ಎಸ್ಎಸ್ ಸಂಯೋಜಕರಾದ ಡಾ. ಕುಮಾರ್, ಯುವ ರೆಡ್ ಕ್ರಾಸ್ ಸಂಯೋಜಕರಾದ ಡಾ. ರಾಜೇಂದ್ರ ಪ್ರಸಾದ್, ಇನ್ನಿತರರು ಹಾಜರಿದ್ದರು.