ರಾಣೆಬೆನ್ನೂರ

ಆರ್‌. ಟಿ.ಇ. ಎಸ್‌. ಕಾಲೇಜು : ಮಾದಕ ವ್ಯಸನ ಅರಿವು ಜಾಗೃತಿ ಶಿಕ್ಷಣ

ಆರ್‌. ಟಿ.ಇ. ಎಸ್‌. ಕಾಲೇಜು : ಮಾದಕ ವ್ಯಸನ ಅರಿವು ಜಾಗೃತಿ ಶಿಕ್ಷಣ

ಆರ್‌. ಟಿ.ಇ. ಎಸ್‌. ಕಾಲೇಜು : ಮಾದಕ ವ್ಯಸನ ಅರಿವು ಜಾಗೃತಿ ಶಿಕ್ಷಣ.  

 ರಾಣೇಬೆನ್ನೂರು : ಅ 29  ಸಮಾಜದಲ್ಲಿ ಸ್ವಾಸ್ಥ  ಮತ್ತು ಆರೋಗ್ಯವಂತ ಬದುಕಿಗಾಗಿ, ಮಾದಕ ವಿಷಯಗಳು ಅದರಿಂದ ಹೊರಬಂದು, ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮುಂದೆ ಬರಬೇಕು ಎಂದು ನೆಹರು ಯುವ ಕೇಂದ್ರದ ಅಧಿಕಾರಿ ಸಂಜೀವ್ ಬುಕ್ಕಾ ಹೇಳಿದರು.  

 ಅವರು ಇತ್ತೀಚೆಗೆ ನಗರ ಹೊರ ವಲಯದ, ಆರ್ ಟಿ ಇ ಎಸ್ ಕಲಾ, ವಿಜ್ಞಾನ ವಾಣಿಜ್ಯ ವಿದ್ಯಾಲಯದಲ್ಲಿ ಆಯೋಜಿಸಿದ್ದ, ಮಾದಕ ವ್ಯಸನ, ವ್ಯಸನದ ಅರಿವು ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

 ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು, ಅತ್ಯಂತ ಜಾಗೃತಿಯಾಗಿ, ತಮ್ಮ ಪಾಲಿನ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಮಹಾಮಾರಿ ಅಹ್ವಾನಿಸಿದಂತೆ. ಇಷ್ಟೆಲ್ಲಾ ಗೊತ್ತಿದ್ದರೂ ಸರ್ಕಾರ ತಂಬಾಕು ನಿಷೇಧ ಮಾಡದೆ ಬರಿ ಜಾಗೃತಿ ಮೂಡಿಸಿದರೆ, ಯಾವುದೇ ಪ್ರಯೋಜನವಿಲ್ಲ ಸರ್ಕಾರವು ಕೂಡಲೇ ತಂಬಾಕು ಬ್ಯಾನ್ ಮಾಡಲು ಮುಂದಾಗಬೇಕು ಎಂದರು.  

         ನೆಹರು ಯುವ ಕೇಂದ್ರದ ಸಂಚಾಲಕ ಹೇಮಗಿರಿ ಅಂಗಡಿ ಅವರು,ಪ್ರಾಸ್ತಾವಿಕವಾಗಿ  ಮಾತನಾಡಿದರು.  

 ಕಾಲೇಜು ಪ್ರಾಚಾರ್ಯ ಸಿ. ಎ.ಹರಿಹರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

 ವೇದಿಕೆಯಲ್ಲಿ ಐಕ್ಯುಎಸಿ ಆರ್‌. ಮಧುಕುಮಾರ್, ಶ್ರೀಮತಿ ಅಂಜನಾ ಪವಾರ, ಸೇರಿದಂತೆ ಕಾಲೇಜು ವಿವಿಧ ವಿಭಾಗಗಳ  ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.  

     ಕುಸುಮಾ ಬಡಿಗೇರ್ ಪ್ರಾರ್ಥಿಸಿದರು. ಎನ್‌.ಎಸ್‌.ಎಸ್  

 ಕಾರ್ಯಕ್ರಮಾಧಿಕಾರಿ ಡಾ. ಸರಸ್ವತಿ ಬಮ್ಮನಾಳ ಸ್ವಾಗತಿಸಿದರು. ನಾಗರಾಜ ಲಮಾಣಿ ನಿರೂಪಿಸಿ, ಆಕಾಶ್ ಹೆಚ್, ವಂದಿಸಿದರು. 


ಸುದ್ದಿ ಓದಿ