ಕಾಗವಾಡ

ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು: ಶ್ರೀಮಂತ ಪಾಟೀಲ

ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು: ಶ್ರೀಮಂತ ಪಾಟೀಲ

ಕಾಗವಾಡ 27: ಸುಸಜ್ಜಿತ ರಸ್ತೆಗಳು ಆಧುನಿಕ ಸಮಾಜದ ಜೀವನಾಡಿಗಳಾಗಿದ್ದು, ಪ್ರತಿಯೊಬ್ಬ ನಾಗರಿಕರು ಹೊಣೆ ಅರಿತು ಅವುಗಳ ನಿರ್ವಹಣೆ ಕಾಪಾಡಬೇಕು. ರಸ್ತೆ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದರು. ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೋಳೆ  ಗ್ರಾಮದಲ್ಲಿ ಎಸ್‍ಸಿಪಿಟಿಎಸ್‍ಪಿ ಯೋಜನೆಯಡಿಯಲ್ಲಿ 38 ಲಕ್ಷ  ರೂ. ವೆಚ್ಚದ ಹರಳಯ್ಯ ರಸ್ತೆ ಕಾಮಗಾರಿಗೆ ಶುಕ್ರವಾರ ದಿ.26 ರಂದು  ಕಾಮಗಾರಿ ಹಾಗೂ ಅಂಗನವಾಡಿ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಉತ್ತಮ ಸಮಾಜ ರೂಪಗೊಳ್ಳಲು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿ ಅರಿತು ಸಹಕಾರ ನೀಡಿದರೆ ಎಲ್ಲ ಕಾಮಗಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತವೆ ಎಂದ ಸಚಿವರು ಕ್ಷೇತ್ರದ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.

ಕಳೆದ ಮುರು ವರ್ಷಗಳಲ್ಲಿ ಕಾಗವಾಡ ಮತ ಕ್ಷೇತ್ರದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ಬೇಸಿಗೆ ಬಂದಿದ್ದರಿಂದ ಕುಡಿಯುವ ನೀರಿನ ತೊಂದರೆಯಾಗುವ  ಪ್ರದೇಶಗಳಲ್ಲಿ ಅಲ್ಲಲ್ಲಿ ಕೊಳವೆ ಬಾವಿ ತೋಡಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ  ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಈ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ  ಭೂತಾಳಿ ಥರಥರೆ ಲೊಕೋಪಯೋಗಿ ಇಲಾಖೆಯ ಅಭಿಯಂತರ ಆರ್.ಪಿ.ಅವತಾಡೆ, ಗುತ್ತಿಗೇದಾರರಾದ ಶಿದರಾಯ ಗಾಡಿವಡ್ಡರ, ಕುಮಾರ ಗಾಡಿವಡ್ಡರ, ಸಂಗಪ್ಪ ಮಾಯನಟ್ಟಿ, ಮುಖಂಡರಾದ ದೀಪಕ ಪಾಟೀಲ, ಗೋರಖನಾಥ ಕೊಳೇಕರ,.ಎ.ಜಿ.ಹಳ್ಳಿ, ದುಂಡಪ್ಪ ತುಗಶೆಟ್ಟಿ, ಎಸ್.ಎಸ್.ಕಡಕೋಳ, ಪಿಂಟು ಮುಂಜೆ, ಗ್ರಾಮ ಪಂಚಾಯತ್ ಸದಸ್ಯರಾದ, ಸಂದೀಪ ನಲವಡೆ, ಲಕ್ಷ್ಮಣ ಹಳಮನಿ, ಧರ್ಮಾಜಿ ಕೊಳೇಕರ, ಗಣಪತಿ ಮೋಳೆಕರ, ಪರಶುರಾಮ ಕಾಂಬಳೆ,ಬಸವರಾಜ ತೇಲಿ,  ಬಾಬು ಮುಂಜೆ ವಸಂತ ಹುಪರಿಮಾಳಿ,  ಸುರೇಶ ಬಳೋಜನವರ, ಅನೀಲ ಕೊಳೇಕರ,   ಭೂಜಬಲಿ ಬೋರಗಾಂವೆ,  ಬಾಳಪ್ಪ ನರಟ್ಟಿ, ಆನಂದ ಕನವಿ, ಸೇರಿದಂತೆ ಅನೇಕ ಗ್ರಾಮ ಪಂಚಾಯತ್ ಸದಸ್ಯರು, ಮುಖಂಡರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


ಸುದ್ದಿ ಓದಿ