ಪೂರ್ಣಿಮಾ ಕುಲಕರ್ಣಿ ರಾಜ್ಯಕ್ಕೆ ತೃತೀಯ ರ್ಯಾಂಕ್
ಬೈಲಹೊಂಗಲ 21: ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ಕುಲಕರ್ಣಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ರಾಂಕ್ ಹೊಂದಿದ್ದಾರೆ. ಶಾಲೆಯ ಫಲಿತಾಂಶ ನೂರರಷ್ಟಾಗಿದ್ದು, 53 ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಪೂರ್ಣಿಮಾ ಕುಲಕರ್ಣಿ (623 ಪ್ರಥಮ), ದರ್ಶನ ದುರದುಂಡೇಶ್ವರಮಠ ತನುಶ್ರೀ ಬಡಿಗೇರ (617 ದ್ವಿತೀಯ), ಶ್ರೀಕರ ತಿರಕನ್ನವರ, ವೈಭವಿ ಪತ್ತಾರ (616) ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕಾರ್ಯದರ್ಶಿ ಮಹಾಂತೇಶ ಕೌಜಲಗಿ, ಆರ್.ಪಿ. ಬಡಸ, ಉಪ ಸಮೀತಿ ಸದಸ್ಯ ಸಂಜೀವಗೌಡ ಪಾಟೀಲ ಹಾಗೂ ಆಡಳಿತ ಮಂಡಳಿ, ಮುಖ್ಯೋಪಾದ್ಯಾಯ ಎಂ.ಸಿ. ಬಿರಾದಾರ ಶಿಕ್ಷಕ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.