ಮನಸ್ಸಿನ ಜಾಗೃತಿಯ ಜತೆಗೆ ದೇಹದ ಶುದ್ಧೀಕರಣ: ಪ್ರಾಚಾರ್ಯ ಹಾವೇರಿ
ಶಿಗ್ಗಾವಿ 21: ಮನಸ್ಸಿನ ಜಾಗೃತಿಯ ಜತೆಗೆ ದೇಹವನ್ನು ಶುದ್ಧೀಕರಣ ಗೊಳಿಸುವುದೇ ಯೋಗ ಎಂದು ಪ್ರಾಚಾರ್ಯ ಶಿವು ಹಾವೇರಿಹೇಳಿದರು. ಪಟ್ಟಣದ ಕುನ್ನೂರ ಇಂಟರ ನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ವಿಧ್ಯಾರ್ಥಿಗಳು ಯೋಗದಿಂದ ಎಲ್ಲ ಪಡೆಯಬಹುದು ಏಕೆಂದರೆ ವಿಧ್ಯಾರ್ಥಿಗಳಿಗೆ ಮುಖ್ಯವಾಗಿ ಜ್ಞಾಪಕಶಕ್ತಿ ಹೆಚ್ಚಿಸಲುಯೋಗ ಸಹಕಾರಿಯಾಗಿದೆ ಅಲ್ಲದೇ ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿಯಾಗಿದೆ ಎಂದರು ಇಂದಿನಿಂದ ವಿದ್ಯಾರ್ಥಿಗಳೆಲ್ಲರೂ ಪ್ರತಿನಿತ್ಯ ಯೋಗಾಭ್ಯಾಸ ಮಾಡೋಣ ಎಂದು ಸಂಕಲ್ಪ ಮಾಡಿದರು.
ದೈಹಿಕ ಶಿಕ್ಷಕ ಮಹೇಶ ಪಾಟೀಲ ವಿದ್ಯಾರ್ಥಿಗಳಿಗೆ ಯೋಗಸಾನಗಳನ್ನು ಹೇಳಿಕೊಟ್ಟು ಮಾತನಾಡಿ ನಮ್ಮ ಮನಸ್ಸು ಮತ್ತು ದೇಹ ಸಧೃಡವಾಗಿರಬೇಕಾದರೆ ‘ಯೋಗ’ ಉತ್ತಮ ಸಾಧನ. ಇದನ್ನುಎಲ್ಲರೂ ಅಳವಡಿಸಿಕೊಂಡರೆ ಅನೇಕ ವ್ಯಾದಿಗಳಿಂದ ದೂರವಿರಬಹುದು ಜೊತೆಗೆ ಉತ್ತಮ ಸಮತೋಲಿತ ಮಾನಸಿಕ ಸ್ಥಿತಿಗತಿಯನ್ನು ಹೊಂದಬಹುದು ಹೇಳಿದರು. ಈ ಸಂದರ್ಭದಲ್ಲಿ ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.