ತಡವಲಗಾದಲ್ಲಿ ಪುನುಗು ಬೆಕ್ಕು ಪತ್ತೆ
ಇಂಡಿ,06: ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಊರ ಹಳ್ಳದಲ್ಲಿ ಪುನುಗು ಬೆಕ್ಕು ಪತ್ತೆಯಾಗಿದೆ.ಆದರೆ ಆ ಪುನುಗು ಬೆಕ್ಕು ಅನಾರೋಗ್ಯದಿಂದ ಬಳಲುತ್ತಿದ್ದನ್ನು ಕಂಡ ತಡವಲಗಾ ಗ್ರಾಮದ ಸಂತೋಷ ಅಳ್ಳೊಳ್ಳಿ ಹಾಗೂ ಬಸವರಾಜ ತಾರಾಪೂರ ಅವರು ಅದನ್ನು ಕಂಡು ಅದನ್ನು ಹಿಡಿದು ಬೈಕ್ ಮೇಲೆ ತಡವಲಗಾ ಗ್ರಾಮದ ಪಶು ಸಂಗೋಪನಾ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆಸ್ಪತ್ರೆಯ ಪಶು ವೈದ್ಯಕೀಯ ಪರಿಕ್ಷಕರಾದ ಅಶೋಕ ಕಾಗರ ಅವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಆ ಪುನುಗು ಬೆಕ್ಕು ಚೇತರಿಸಿಕೊಂಡಿತ್ತು.
ಆ ಪುನುಗು ಬೆಕ್ಕುನ್ನು ಮತ್ತೆ ಊರ ಹಳ್ಳದಲ್ಲಿ ಬೀಡಲಾಯಿತು.ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಪುನುಗು ಬೆಕ್ಕುನ್ನು ಪಶು ಆಸ್ಪತ್ರೆಗೆ ತಂದಿದ್ದ ಯುವಕರ ಹಾಗೂ ಸಕಾಲದಲ್ಲಿ ಚಿಕಿತ್ಸೆ ನೀಡಿ ಪುನುಗು ಬೆಕ್ಕಿನ ಪ್ರಾಣ ಉಳಿಸಿದ ಇವರ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.