ಬೈಲಹೊಂಗಲ

ಪುನೀತ ಟ್ರೋಪಿ: ಟೆನಿಸ್ ಬಾಲ ಕ್ರಿಕೆಟ್ ಪಂದ್ಯಾವಳಿಗೆ ಮೆಟಗುಡ್ಡ ಚಾಲನೆ

ಪುನೀತ ಟ್ರೋಪಿ: ಟೆನಿಸ್ ಬಾಲ ಕ್ರಿಕೆಟ್ ಪಂದ್ಯಾವಳಿಗೆ ಮೆಟಗುಡ್ಡ ಚಾಲನೆ

ಬೈಲಹೊಂಗಲ 08: ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಸೋಲು ಗೆಲುವು ಎನ್ನದೇ ಆಟದಲ್ಲಿ ಭಾಗಿಯಾಗಬೇಕಿದೆ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು. 

ಅವರು ಪಟ್ಟಣದ ಎಂ.ಎಸ್‌.ಎಸ್‌.ಆರ್‌.ಪ್ರೌಢಶಾಲೆಯ ಮೈದಾನದಲ್ಲಿ ರಾಜ್ಯಮಟ್ಟದ ಪುನೀತ ಟ್ರೋಪಿ ಪುಲ್ ಪಿಚ್ ಟೆನಿಸ್ ಬಾಲ್ ಮುಕ್ತ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಏಕಾಗ್ರತೆ, ಸಂಘಟಿತವಾದ ಹೋರಾಟದಿಂದ ಜಯ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡೆಗಳಲ್ಲಿ ಸೋಲಿ ಗೆಲುವು ಸಹಜವಾಗಿರುತ್ತವೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ಎದುರಾಗುವಂತಹ ಎಲ್ಲ ಒತ್ತಡಗಳನ್ನು ನಿಭಾಯಿಸಲಿಕ್ಕೆ ಕ್ರೀಡೆಗಳಿಂದ ಸಾಧ್ಯವಾಗುತ್ತದೆ ಎಂದರು. 

ಪುರಸಭೆ ನಿಕಟ ಪೂರ್ವ ಅಧ್ಯಕ್ಷ ಬಾಬು ಕುಡಸೋಮನ್ನವರ, ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಬಿರಾದಾರ ಮಾತನಾಡಿ, ನಾಯಕತ್ವದ ಗುಣಗಳು ಬೆಳೆಯುವದರ ಜೊತೆಗೆ ಸಮಯ ಪ್ರಜ್ಞೆ ಮುಡಿಸಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿವೆ ಎಂದರು. 

ಬೇವಿನಕೊಪ್ಪ ವಿಜಯಾನಂದ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಶಂಕರ ಮಾಡಲಗಿ, ವಿಜಯ ಮೆಟಗುಡ್ಡ, ಬಾಬು ಕುಡಸೋಮನ್ನವರ, ವಿಜಯ ಬೊಳನ್ನವರ, ಶಿವಾನಂದ ಬೆಳಗಾವಿ, ಶಿವಾನಂದ ಪಟ್ಟಣಶೆಟ್ಟಿ, ಶಿವಾನಂದ ಇಂಚಲ, ನಾಗರಾಜ  ಸಂಗೊಳ್ಳಿ, ಮಂಜು ಮರಶೆಟ್ಟಿ, ಬಸವರಾಜ ಅಂಬೋಜಿ, ರವಿ ಪವಾರ, ವೆಂಕಟೇಶ ದಾಸೋಗ, ಸಾಧಿತ ತಿಗಡಿ, ಪೈರೋಜ ನಾಲಬಂದ, ರಫೀಕ ದೇಶನೂರ ಸೇರಿದಂತೆ ಪುನೀತ ಟ್ರೋಫಿಯ ಕಮೀಟಿಯ ಸದಸ್ಯರು ಇದ್ದರು. 


ಸುದ್ದಿ ಓದಿ