ಪುನೀತ್ ರಾಜಕುಮಾರ್ ಹುಟ್ಟುಹಬ್ಬ: ಹೃದಯ ರೋಗ ತಪಾಸಣಾ ಶಿಬಿರ
ರಾಣೇಬೆನ್ನೂರು, 19: ಇಂದಿನ ಆಧುನಿಕ ಬದುಕಿನ ಆಹಾರ ಕ್ರಮದ ಪರಿಣಾಮ ಅನೇಕ ರೋಗದ ಜನಗಳಿಗೆ ಬಲಿ ಆಗಬೇಕಾಗುತ್ತದೆ. ಪ್ರತಿಯೊಬ್ಬರು ಕನಿಷ್ಠ ವರ್ಷಕ್ಕೊಮ್ಮೆಯಾದರೂ ತಮ್ಮ ಹೃದಯದ ಬಗ್ಗೆ ತಪಾಸಣೆಗೊಳ ಪಟ್ಟು, ಹೃದಯ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದುದಾವಣಗೆರೆ ಎನ್ ಹೆಚ್ ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯ ಡಾ: ಬಿ. ಗುರುರಾಜ್ ಹೇಳಿದರು. ಅವರು, ಸೋಮವಾರ, ಇಲ್ಲಿನ ಎಪಿಎಂಸಿ ಗಣೇಶ ದೇವಸ್ಥಾನ ಸಭಾಭವನದಲ್ಲಿ, ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟು ಹಬ್ಬದ ನಿಮಿತ, ಸ್ವಾಕರವೇ, ಜೆ.ಸಿ. ಐ. ಕಾಕಿ ಜನ ಸೇವಾ ಸಂಸ್ಥೆ ದಾವಣಗೆರೆ ನಾರಾಯಣ ಹೃದಯಾಲಯ, ವರ್ತಕರ ಸಂಘ ಆಯೋಜಿಸಿದ್ದ, ಉಚಿತ ಹೃದಯ ರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದಿನ ದುಬಾರಿ ಕಾಲದಲ್ಲಿ ಹೃದಯ ತಪಾಸಣೆ ಮಾಡಿಕೊಳ್ಳುವುದು ಜನಸಾಮಾನ್ಯರಿಗೆ ಸಾಧ್ಯವಾಗದ ಮಾತು ಅದಕ್ಕಾಗಿ, ಹೃದಯಾಲಯವು, ಸ್ಥಳೀಯವಾಗಿರುವ ಸಾಮಾಜಿಕ ಸಂಘ ಸಂಸ್ಥೆಗಳೊಂದಿಗೆ, ಸಮ್ಮಿಳಿ ತಗೊಂಡು, ನಾಡಿನೆಲ್ಲೆಡೇ, ಶಿಬಿರ ಆಯೋಜಿಸಿ, ಬಡವರ, ದೀನದಲಿತರ ಸೇವೆ ಮಾಡುತ್ತಿದ್ದೇವೆ ಎಂದರು. ಸಂಘಟನೆಯ ಮುಖಂಡರಾದ ನಿತ್ಯಾನಂದ ಕುಂದಾಪುರ, ಪ್ರಭುಲಿಂಗಪ್ಪ ಹಲಗೇರಿ, ಜಿ.ಜಿ. ಹೊಟ್ಟಿಗೌಡ್ರ, ಶಿವಶಂಕರ್ ಕಾಕಿ, ಕೊಟ್ರೇಶಪ್ಪ ಎಮ್ಮಿ, ದೇವರಾಜ ಕಲಾಲ, ಕೊಟ್ರೇಶ್ ಕುಂದಾಪುರ, ಉಮೇಶ ಹೊನ್ನಾಳಿ, ನಾಗರಾಜ ಹಾರೋಗೊಪ್ಪ, ಹೃದಯಾಲಯದ ಡಾ. ಗುಡ್ಡಪ್ಪ,, ವಂದನ ನುಚ್ಚಿ, ಭಾಷಾಸಾಬ್ ಹಂಪಾಪಟ್ನ, ಸೇರಿದಂತೆ ಮತ್ತಿತರ ಗಣ್ಯರು, ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮುಂಜಾನೆ 10 ರಿಂದ ಆರಂಭವಾದ ತಪಾಸಣಾ ಶಿಬಿರದಲ್ಲಿ 110ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡಿದ್ದರು. ತಪಾಸಣೆಗೊಳಪಟ್ಟು, ಸೂಕ್ತ ಸಲಹೆ ಸೂಚನೆ ಮಾರ್ಗದರ್ಶನ ಪಡೆದರು.