ಕಾಗವಾಡ

ಪುನೀತ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ: ನವಿನ್ಯಾಳ

ಪುನೀತ  ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ: ನವಿನ್ಯಾಳ

ಶೇಡಬಾಳ 31: ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಪುನೀತರಾಜಕುಮಾರ ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಾಗವಾಡ ತಾಲೂಕಾ ಕರವೇ ಗೌರವಾಧ್ಯಕ್ಷ ಶಿವಾನಂದ ನವಿನ್ಯಾಳ ಹೇಳಿದರು.  

ಅವರು ರವಿವಾರ ದಿ 31 ರಂದು ಕಾಗವಾಡ ಪಟ್ಟಣದ ಚನ್ನಮ್ಮಾ ಸರ್ಕಲನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಏರಿ​‍್ಡಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪುನಿತರಾಜಕುಮಾರ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡುತ್ತಿದ್ದರು. 

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಅವರು ತಮ್ಮ 47 ನೇ ವಯಸ್ಸಿನಲ್ಲಿ ನಿಧನ ಹೊಂದಿರುವುದು ಕನ್ನಡ ನಾಡಿನ ಜನತೆಗೆ ಮತ್ತು ಅವರ ಅಭಿಮಾನಿಗಳಿಗೆ ಅತ್ಯಂತ ದು:ಖದ ಸಂಗತಿಯಾಗಿದೆ ಎಂದು ಹೇಳಿದರು. 

ಕರವೇ ಕಾರ್ಯಕರ್ತರು ಪುನಿತರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. 

ಕಾಗವಾಡ ಪಿಎಸ್‌ಐ ಬಿ ಎಮ್ ರಬಕವಿ, ಎ ಎಸ್ ಐ ಸಾವಂತ ಕುಂಬಾರ, ಪಪಂ ಮುಖ್ಯಾಧಿಕಾರಿ ರವೀಂದ್ರ ಸನಗೌಡರ, ಕರವೇ ತಾಲೂಕಾ ಅಧ್ಯಕ್ಷ ಸಿದ್ದು ಒಡೆಯರ, ಯುವಘಟಕದ ಅಧ್ಯಕ್ಷ ಪ್ರವೀಣ  ಪಾಟೀಲ,  ಉಪಾಧ್ಯಕ್ಷ ಗಣೇಶ ಕೋಳೆಕರ, ಫಾರೂಕ ಅಲಾಸೆ, ಕಾಕಾ ಪಾಟೀಲ, ಚೇತನ ಪಾಟೀಲ, ಸಚಿನ ಪಾಟೀಲ, ರಮೇಶ ಚೌಗುಲೆ,  ಪ್ರಕಾಶ ಪಾಟೀಲ, ಆಕಾಶ ಅರವಾಡೆ, ಬಾಪು ಕಾಂಬಳೆ, ಮಹಾಂತೇಶ ಬಡಿಗೇರ, ಅಸ್ಲಂ ಜಮಾದಾರ, ದಯಾನಂದ ಪಾಟೀಲ, ರಾಜು ಶಿರಗುಪ್ಪಿ, ಮೂಜಬ ಮುಲ್ಲಾ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ