ಸಾರ್ವಜನಿಕರು ಪಂಚಕರ್ಮದ ಲಾಭ ಪಡೆಯಿರಿ: ಹಳಿಂಗಳಿ
ಶೇಡಬಾಳ 28: ಮಿರಜದ ನಿರ್ಮಲ್ ಆಸ್ಪತ್ರೆ ಹಾಗೂ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆಯುರ್ವೇದಿಕ ಪಂಚಕರ್ಮ ವಿಭಾಗವನ್ನು ಪ್ರಾರಂಭಿಸಲಾಗಿದ್ದು, ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಡಾ. ಚಂದ್ರಶೇಖರ ಹಳಿಂಗಳಿ ಹೇಳಿದರು.
ಅವರು ಗುರುವಾರ ದಿ. 27 ರಂದು ಮಿರಜ ನಿರ್ಮಲ್ ಆಸ್ಪತ್ರೆ ಆಯುರ್ವೇದಿಕ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ಪಂಚಕರ್ಮ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಜೀವನಶೈಲಿಗೆ ಆಯುರ್ವೇದಿಕ ಓಷಧವು ಅತ್ಯಂತ ಸೂಕ್ತವಾಗಿದೆ.
ಯೋಗಾಚಾರ್ಯ ಡಾ. ಪ್ರಶಾಂತ ಜಾಧವ ಪಂಚಕರ್ಮ ವಿಭಾಗದ ಕುರಿತು ವಿವರವಾಗಿ ಮಾತನಾಡಿದರು.
ನಿರ್ಮಲ್ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ಹಳಿಂಗಳಿ, ಡಾ. ಶಾಲ್ಮಲಿ ಕುಲಕರ್ಣಿ, ಯೋಗಾಚಾರ್ಯ ಡಾ. ಪ್ರಶಾಂತ ಜಾಧವ ಹಾಗೂ ನಿರ್ಮಲ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.