ಧಾರವಾಡ - ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಶಾಸಕರ ಜನಸಂಪರ್ಕ ಸಭೆ

ಹುಬ್ಬಳ್ಳಿಯಲ್ಲಿ ಶಾಸಕರ ಜನಸಂಪರ್ಕ ಸಭೆ

ಹುಬ್ಬಳ್ಳಿ 06: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ ನಂ 48 ರ ಚೇತನಾ ಕಾಲನಿ, ಜವಾಹರ ಲೇಓಟ್ ಹಾಗೂ ಕಲ್ಕಿ ಅಪಾರ್ಟಮೆಂಟ್ ನಿವಾಸಿಗಳೊಂದಿಗೆ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಜನಸಂಪರ್ಕ ಸಭೆ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. 

ನಗರದ ಚೇತನಾ ಕಾಲೋನಿಯ ಬನ್ನಿ ಮಹಾಕಾಳಿ ದೇವಿ ದೇವಾಲಯಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಪೂಜೆ ಸಲ್ಲಿಸಿ ಚೇತನಾ ಕಾಲೋನಿಯ ಹಿರಿಯರು ಹಮ್ಮಿಕೊಂಡ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.  ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳ ಕುರಿತು ಆಲಿಸಿದ ಶಾಸಕರು ಇಲಾಖಾವಾರು ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರವೇ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು. 

ಚೇತನಾ ಕಾಲೋನಿಯ ಸಾರ್ವಜನಿಕರ ಕುಂದುಕೊರತೆಗಳನ್ನು ಈಡೇರಿಸುವುದಾಗಿ ಮತ್ತು ಭಯಲು ರಂಗಮಂದಿರ ನಿರ್ಮಾದ ಭರವಸೆ ಜೋತೆಗೆ ಸಂಪೂರ್ಣ ಅಭಿವೃದ್ಧಿಯ ಕುರಿತಾಗಿ ಈ ಸಂದರ್ಭದಲ್ಲಿ ತಿಳಿಸಿದರು 

ಕಾರ್ಯಕ್ರಮದಲ್ಲಿ ಕಾಲನಿಯ ಹಿತರಕ್ಷಣಾ ಟ್ರಸ್ಟಿನ ಗೌರವ ಅಧ್ಯಕ್ಷರಾದ ಡಾ. ಎಸ್‌. ಆರ್‌. ವಾಲಿ, ಅಧ್ಯಕ್ಷರಾದ ವಿ. ಎಸ್‌. ಸವದತ್ತಿ, ಕಲ್ಕಿ ಅಪಾರ್ಟಮೆಂಟ್ ಅಧ್ಯಕ್ಷರಾದ ಪ್ರಶಾಂತ ಸಾವಳಗಿ, ಸಿ.ಪಿ ಕಿಲಾರಿಮಠ, ಎಸ್‌.ಎಂ ಬದಾಮಿ, ಮಹಾಂತೇಶ ಅಕ್ಕಿ, ಪ್ರಮುಖರಾದ ವಿಶ್ವನಾಥ ಅಂಗಡಿ, ರವಿರಾಜ ಕೊಡ್ಲಿ, ಕೃಷ್ಣ ಉಪ್ಪೆರ, ಲಿಂಗರಾಜ ಬೆಳ್ಳಿಗಟ್ಟಿ, ಶಿವಶರಣ, ಗೋಪಾಲಕೃಷ್ಣ ಹೆಗಡೆ, ರಾಜಶೇಖರ ಬಬ್ಲಿ, ರಾಮನಗೌಡ ಶೆಟ್ಟೆನಗೌಡರ ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಟ್ರಸ್ಟಿ ಭೀಮಸೇನಾಚಾರ ಬಡಿಗೇರ ಕಾರ್ಯಕ್ರಮವನ್ನು ನಿರೂಪಿಸಿದರು, ಉಪನ್ಯಾಸಕ ಬೀರೇಶ ತಿರಕಪ್ಪನವರ ಸ್ವಾಗತಿಸಿದರು. 


ಸುದ್ದಿ ಓದಿ