ಇಂಡಿ

ಚಾಲಕರು ಹಾಗೂ ನಿರ್ವಾಹಕರ ತಮಗೆ ಇಷ್ಟವಾದ ಮಾರ್ಗವಾಗಿ ಬಸ್ಸು ಚಾಲನೆ : ಸಾರ್ವಜನಿಕರ ಆಕ್ರೋಶ

ಚಾಲಕರು ಹಾಗೂ ನಿರ್ವಾಹಕರ ತಮಗೆ ಇಷ್ಟವಾದ ಮಾರ್ಗವಾಗಿ ಬಸ್ಸು ಚಾಲನೆ : ಸಾರ್ವಜನಿಕರ ಆಕ್ರೋಶ

ಇಂಡಿ 20: ತಾಲೂಕಿನ ಗ್ರಾಮೀಣ ಪ್ರದೇಶದಿಂದ ವಿವಿಧ ನಗರಗಳಿಗೆ ಹೋಗಿ ಬರಲು ಸಾರಿಗೆ ಇಲಾಖೆ ಅನೇಕ ನಗರಗಳಿಗೆ ಹೋಗಿ ಬರಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಇಂಡಿ ಘಟಕದಿಂದ ಸಾಕಷ್ಟು ಬಸ್ಸು ವ್ಯವಸ್ಥೆ ಮಾಡಲಾಗಿದೆ.ಆದರೆ ಆ ಬಸ್ಸುಗಳು ಇಂಡಿ ಘಟಕ ವ್ಯವಸ್ಥಾಪಕರ ಆದೇಶ ಮೀರಿ ತಮಗೆ ಇಷ್ಟವಾದ ಮಾರ್ಗವಾಗಿ ಬಸ್ಸುಗಳನ್ನು ಚಲಿಸುತಿರುವುದು  ಚಾಲಕರು ಹಾಗೂ ನಿರ್ವಾಹಕರ ನಡೆ ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡಿದೆ. ಒಂದು ವೇಳೆ ಮಾರ್ಗಮಧ್ಯೆ ಏನಾದರೂ ಅನಾಹುತ ಆದರೆ ಅದಕ್ಕೆ ಯಾರು ಹೊಣೆ ಎಂಬೂವುದೇ ಸಾರ್ವಜನಿಕ ಯಕ್ಷ ಪ್ರಶ್ನೆಯಾಗಿದೆ.ಹೌದು ನಾವು ಹೇಳುತ್ತಿರುವುದು ಇಂಡಿ ಘಟಕದ ಸಮಸ್ಯೆ ಹೌದು. 

ಇಂಡಿಯಿಂದ ವಿಜಯಪೂರ ಹಾಗೂ ವಿಜಯಪೂರದಿಂದ ಇಂಡಿಗೆ ಹೋಗುವ ಎಲ್ಲಾ ಬಸ್ಸುಗಳು ತಡವಲಗಾ ಮಾರ್ಗವಾಗಿ ಚಲಾಯಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಇಂಡಿ ಘಟಕ ವ್ಯೆವಸ್ಥಾಪಕರಾದ ಎಸ್ ಜಿ ಬಿರಾದಾರ 06-07-2024 ಆದೇಶವನ್ನು ಹೋರಡಿಸಿದರು, ಆದರೆ ಆ ಆದೇಶಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ.ಇಂಡಿ-ವಿಜಯಪೂರ-ದಾವಣಗೇರಿ ಬಸ್ಸು ತಡವಲಗಾ ಮಾರ್ಗವಾಗಿ ಚಲಾಯಿಸದೆ ಹಿರೇರೂಗಿ ಮಾರ್ಗವಾಗಿ ವಿಜಯಪೂರಕ್ಕೆ ಚಲಾಯಿಸಿದೆ. ಇಂಡಿಯಿಂದ ವಿಜಯಪೂರ ಹಾಗೂ ವಿಜಯಪೂರದಿಂದ-ಇಂಡಿಗೆ ಹೋಗುವ ಎಲ್ಲಾ ತಡವಲಗಾ ಮಾರ್ಗವಾಗಿ ಚಲಾಯಿಸಬೇಕು ಎಂದು ಗಮನಿಸಿ,ಜೋಡಗುಡಿ ಹತ್ತಿರ ಒಬ್ಬ ಸಾರಿಗೆ ನಿಯಂತ್ರಕನ್ನು ನೇಮಿಸಲಾಗಿದೆ. 

ಆದರೆ ಸಾರಿಗೆ ನಿಯಂತ್ರಣ ಹೇಳಿದರು ಕೂಡಾ ಕೆಲ ಚಾಲಕರು ಮತ್ತು ನಿರ್ವಾಹಕರು ಮಾತು ಕೇಳದೆ ಮಾರ್ಗ ಬದಲಾಯಿಸಿ ಹೋಗುತ್ತಿರುವುದು ವಿಪರ್ಯಾಸವೇ ಸರಿ. ಮಾರ್ಗಸೂಚಿ ಇದ್ದರೂ ಕೂಡಾ ಬೇರೆ ಕಡೆ ಹೋದರೆ ಕೂಡಾ, ತಪ್ಪು ಮಾಡಿದರು ಕೂಡಾ ಸಂಬಂದಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುದಿರುವುದ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನವನ್ನು ವ್ಯಕ್ತವಾಗುತ್ತಿದೆ. ಹಾಗೂ ಇಂಡಿ -ವಿಜಯಪೂರ-ದಾವಣಗೆರಿ ಬಸ್ಸು ತಡವಲಗಾ ಗ್ರಾಮಕ್ಕೆ ಬರುತ್ತದೆ ಎಂದು ಕಾದು ಕುತ್ತು ಸುಸ್ತಾದರು. ಏನೇ ಇರಲಿ,ಯಾರೇ ಇರಲಿ ತಪ್ಪು ಮಾಡಿದ ಚಾಲಕರು ಹಾಗೂ ನಿರ್ವಾಹಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ