ರಾಣೆಬೆನ್ನೂರ

ಕಳಪೆ ಕಾಮಗಾರಿಯ ರುವಾರಿ ಗುತ್ತಿಗೆದಾರ ಚನ್ನಮಲ್ಲಿಕಾರ್ಜುನನ್ನು ಬ್ಲಾಕ್‌ಲಿಸ್ಟಿನಲ್ಲಿಡುವಂತೆ ಒತ್ತಾಯಿಸಿ ಜನಾಕ್ರೋಶ

ಕಳಪೆ ಕಾಮಗಾರಿಯ ರುವಾರಿ ಗುತ್ತಿಗೆದಾರ ಚನ್ನಮಲ್ಲಿಕಾರ್ಜುನನ್ನು ಬ್ಲಾಕ್‌ಲಿಸ್ಟಿನಲ್ಲಿಡುವಂತೆ ಒತ್ತಾಯಿಸಿ ಜನಾಕ್ರೋಶ

ಕಳಪೆ ಕಾಮಗಾರಿಯ ರುವಾರಿ ಗುತ್ತಿಗೆದಾರ ಚನ್ನಮಲ್ಲಿಕಾರ್ಜುನನ್ನು ಬ್ಲಾಕ್‌ಲಿಸ್ಟಿನಲ್ಲಿಡುವಂತೆ ಒತ್ತಾಯಿಸಿ ಜನಾಕ್ರೋಶ   

ರಾಣೇಬೆನ್ನೂರು 22: ಜಿಲ್ಲೆಯಲ್ಲಿ ರಸ್ತೆ ಮತ್ತು ಇತರೆ ಕಾಮಗಾರಿಗಳ ಗುತ್ತಿಗೆ ಪಡೆದು ಟೆಂಡರ್ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಕಾಮಗಾರಿ ಮುಗಿಯದಿದ್ದರೂ ‘ಬಿಲ್‌’ ಗೆ ಸಹಿ ಮಾಡುವಂತೆ ಹಿರಿಯ ಮತ್ತು ತಾಂತ್ರಿಕ ವರ್ಗದ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು ಒಪ್ಪದ ಅಧಿಕಾರಿಗಳನ್ನು ಲೋಕಾಯುಕ್ತ ಮತ್ತು ಇ.ಡಿ.ಗೊಳಪಡಿಸುತ್ತೇನೆ ಅಂತಾ ಹೆದರಿಸಿ, ಬೆದರಿಸಿ ಸಹಿ ಮಾಡಿಸಿಕೊಂಡು ಕಳಪೆ ಕಾಮಗಾರಿ ಮಾಡಿ ಸರಕಾರ, ಇಲಾಖೆ ಮತ್ತು ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿಯಾಗಿ ಲೂಟಿ ಹೊಡೆಯುವುದನ್ನೇ ರೂಢಿ ಮಾಡಿಕೊಂಡಿರುವ ಚನ್ನಮಾಲ್ಲಿಕಾರ್ಜುನ ಡಿ. ಹಾವೇರಿ ಇವರನ್ನು ಬಂಧಿಸಿ ಬ್ಲಾಕ್‌ಲಿಸ್ಟಿನಲ್ಲಿಟ್ಟು ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ಇಂದು ಜನಾಕ್ರೋಶಗೊಂಡು “ 2” ಘಂಟೆಗಳ ಕಾಲ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯನ್ನು ಇಟಗಿ-ಹಲಗೇರಿ ಮಧ್ಯದಲ್ಲಿ ಬಂದ್ ಮಾಡಿದ ಘಟನೆ ಬೆಳಗ್ಗೆ 11 ಘಂಟೆಗೆ ಜರುಗಿತು.  

      ಅಂತರಾಜ್ಯ, ಅಂತರಜಿಲ್ಲೆಗಳಿಗೆ ಸಂಪರ್ಕ ಕಲ್ಪ್ಪಿಸಬಲ್ಲ ಪ್ರಮುಖ ರಸ್ತೆಯಾಗಿರುವ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯ ಇಟಗಿ-ಹಲಗೇರಿ ಮಧ್ಯದ ರಸ್ತೆ ಸಂಪೂರ್ಣವಾಗಿ ತೆಗ್ಗು ಆಳೆತ್ತರದ ಗುಂಡಿಗಳಿಂದ ತುಂಬಿ ಹೋಗಿತ್ತು. ವಾಹನ ಸವಾರರಿಗೆ ಇಲ್ಲಿಯ ‘5’ ಕಿ.ಮೀ. ಪ್ರಯಾಣ ಚಾರ್ಮಡಿ ಘಾಟಿಗಿಂತ ದುಸ್ಥರವಾಗಿತ್ತು. ರೈತ ಸಂಘಟನೆಯಿಂದ ರವೀಂದ್ರಗೌಡ ಎಫ್‌. ಪಾಟೀಲ, ಈರಣ್ಣ ಹಲಗೇರಿ ನೇತೃತ್ವದಲ್ಲಿ ರಸ್ತೆ ರಿಪೇರಿ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಹತ್ತಾರು ಬಾರಿ ಸರ್ಕಾರದ ಗಮನ ಸೆಳೆಯುವಂತ ಹೋರಾಟಗಳನ್ನು ಇಲ್ಲಿಯ ತೆಗ್ಗುಗುಂಡಿಗಳಲ್ಲಿ ಮಲಗಿ ಪ್ರತಿಭಟಿಸಲಾಗಿತ್ತು. ಈಗಿನ ಸರ್ಕಾರ ಎಸ್‌. ಎಚ್‌. ಡಿ. ಪಿ. ಯೋಜನೆಯಲ್ಲಿ 3.76 ಕಿ.ಮೀ ಮಂಜೂರು ಮಾಡಿ 10 ಕೋಟಿ ರೂ.ಗೆ ಟೆಂಡರ್ ನೀಡಲಾಗಿತ್ತು. ಆ ಟೆಂಡರ್ ಪಡೆದ ಚನ್ನಮಲ್ಲಿಕಾರ್ಜುನ ಡಿ ಹಾವೇರಿ ಟೆಂಡರ್ ನಿಯಮಗಳನ್ನೆಲ್ಲಾ ಬ್ರೆಕ್ ಮಾಡಿ ಕಳಪೆ ಕಾಮಗಾರಿ ಮಾಡುತ್ತಾ ಕೆಂಪು ಮಣ್ಣು ಹಾಕಿ ನೀರು ಹೊಡೆಯದೆ ಇದ್ದುದ್ದರಿಂದ ಭಾರಿ ವಾಹನಗಳು ಓಡಾಡುವ ಈ ರಸ್ತೆಯಲ್ಲಿ ಅಕ್ಕಪ್ಪಕ್ಕದ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳ ಮೇಲೆ ಇಂಚು ಇಂಚು ದಪ್ಪದ ಕೆಂಪು ಮಣ್ಣು ಕುಳಿತು ಬೆಳೆ ಅಷ್ಟೇ ಅಲ್ಲಾ ಹೊಲಗಳೆಲ್ಲಾ ಕೆಂಪಾಗಿದ್ದವು. ಬೆಳೆಗಳು ನಾಶಗೊಂಡಿದ್ದವು. ಇದರಿಂದ ಆಕ್ರೋಶಗೊಂಡ ರೈತರು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ, ಈರಣ್ಣ ಹಲಗೇರಿ ನೇತೃತ್ವದಲ್ಲಿ ಇಂದು ರಸ್ತೆ ತಡೆದು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜೀನೀಯರ್ ಮರಿಸ್ವಾಮಿ ತಮ್ಮ ಅಧಿಕಾರಿಗಳೊಂದಿಗೆ ಧಾವಿಸಿದರೆ, ಹಲಗೇರಿ ಪಿ.ಎಸ್‌.ಐ. ಪರಶುರಾಮ ಲಮಾಣಿ ಯವರು ತಮ್ಮ ಸಿಬ್ಬಂದಿಯೊಂದಿಗೆ ಯಾವುದೇ ಅಹಿತಕರ ಘಟನೆ ಜರುಗದಂತೆ ನೋಡಿಕೊಂಡು ಇಟಗಿಯಿಂದ ಎಣ್ಣಿ ಹೊಸಳ್ಳಿ ಹಲಗೇರಿಯವರೆಗೆ ಭಾರಿ ವಾಹನಗಳಿಂದ ರಸ್ತೆ ಜಖಂಗೊಂಡಿತ್ತು.  

     ಪ್ರತಿಭಟನೆಯ ನೇತೃತ್ವ ವಹಿಸಿದ್ದ ರವೀಂದ್ರಗೌಡ ಎಫ್ ಪಾಟೀಲ ಮಾತನಾಡಿ ತಪ್ಪಿತಸ್ಥ ಗುತ್ತಿಗೆದಾರನನ್ನು ಈ ಕೂಡಲೇ ಸ್ಥಳಕ್ಕೆ ಕರೆಯಿಸಬೇಕೆಂದು ಅಧಿಕಾರಿಗಳಿಗೆ ಪಟ್ಟುಹಿಡಿದರು. ಗುತ್ತಿಗೆದಾರ ಬೆಂಗಳೂರಿನಲ್ಲಿ ಇದ್ದೇನೆ ಅಂತಾ ಸ್ಥಳಕ್ಕೆ ಬಾರದೆ ತಪ್ಪಿಸಿಕೊಂಡಾಗ ಪೊಲೀಸ್ ಅಧಿಕಾರಿಗಳು ಆತ ಎಲ್ಲೇ ಇದ್ದರೂ ನಾವು ಕರೆಸುತ್ತೇವೆ ಸಮಯ ಕೊಡಿ. ‘29’ ತಾರೀಖಿಗೆ ಸಭೆ ಮಾಡಿ ನಿಮ್ಮೆಲ್ಲರ ಸಮಕ್ಷಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳೊಣ, ಸಾರ್ವಜನಿಕರಿಗೆ ತೊಂದರೆಯಾಗುವುದು ಬೇಡ ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ರಸ್ತೆ ತೆರವುಗೊಳಿಸಿರಿ ಅಂತಾ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.  

     ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ ಗುತ್ತಿಗೆದಾರ ಬ್ರಿಟಿಷರಿದ್ದಂತೆ ಅಂದು ಅವರು ಕೊಳ್ಳೆ ಹೊಡೆದಿದ್ದರು. ಇಂದು ಇವರು ಕೊಳ್ಳೆ ಹೊಡೆಯುತ್ತಿದ್ದಾರೆ. ಬೆಳೆ ನಾಶಗೊಂಡ ರೈತರಿಗೆ ಪರಿಹಾರ ನೀಡಿ ಗುಣಮಟ್ಟದ ಕಾಮಗಾರಿ ಆಗುವ ತನಕ ಸಿ.ಡಿ. ಹಾವೇರಿಯನ್ನು ಬ್ಲಾಕ್‌ಲಿಸ್ಟಿನಲ್ಲಿ ಇಡುವತನಕ ನಾವು ಈ ಹೋರಾಟದಿಂದ ವಿರಮಿಸುವುದಿಲ್ಲ ಎಂದರು. ಸ್ಥಳಕ್ಕೆ ದಾವಿಸಿದ ಆರ್‌.ಟಿ.ಓ ಇಲಾಖೆಯ ಸುಪ್ರಿಟೆಂಡರ್ ಖಾಲಿದ್‌ಸಾಬ ಸ್ಥಳದಲ್ಲೇ ನಿಯಮ ಮೀರಿದ ಲಾರಿಗಳಿಗೆ ದಂಡ ವಿಧಿಸಿ ದೂಳಾಗದಂತೆ ತಾಡಪತ್ರಿ ಹಾಕಿಕೊಂಡು ವಾಹನ ಚಲಾಯಿಸಿ ಎಂದು ಆದೇಶಿಸಿದರು.  

     ಪ್ರತಿಭಟನೆಯಲ್ಲಿ ಚಂದ್ರಣ್ಣ ಬೇಡರ, ಮಾರುತಿ ಗುಡಿಯವರ, ಮಂಜಪ್ಪ ಶಿವಲಿಂಗಪ್ಪನವರ, ಬಸವರಾಜ ತಳವಾರ, ಗ್ರಾ.ಪಂ. ಉಪಾಧ್ಯಕ್ಷ ಹನುಮಂತಪ್ಪ ಉಕ್ಕುಂದ, ವೆಂಕರಡ್ಡಿ ಎರೇಶಿಮಿ, ಆನಂದ ದೇಶಗತ್ತಿ, ಹಾಲೇಶ ಕೆಂಚನಾಯ್ಕರ, ಮೌನೇಶ ಎಂ. ಗುತ್ತಲ, ಸುರೇಶ ಮಲ್ಲಾಪುರ, ರುದ್ರಗೌಡ ಸಣ್ಣಗೌಡ್ರ, ಶಿವಣ್ಣ ಮಾಕನೂರ, ಭೀಮಣ್ಣ ಮಾಕನೂರು, ಹನುಮಂತಪ್ಪ ಬಾನುವಳ್ಳಿ, ಹರಿಹರಗೌಡ ಪಾಟೀಲ, ಪವನ ಬೆನಕನಗೊಂಡ, ಚನ್ನಬಸಪ್ಪ ಶಿವಲಿಂಗಪ್ಪನವರ, ಚಂದ್ರ​‍್ಪ ದೇಶಗತ್ತಿ, ಹಾಲೇಶ ಗುತ್ತಲ, ಪ್ರಕಾಶ ದೊಂಬರಮತ್ತೂರ ಮುಂತಾದ ನೂರಾರು ರೈತರು ಭಾಗಹಿಸಿದ್ದರು. 


ಸುದ್ದಿ ಓದಿ