31ರಂದು ಆರ್ ಶಂಕರ್ ಅಭಿಮಾನಿಗಳ, ಸಾರ್ವಜನಿಕ ಸಭೆ
ರಾಣೇಬೆನ್ನೂರು 29: ಮಾಜಿ ಸಚಿವ, ಏನ್ ಸಿ ಪಿ ಪಕ್ಷದ ಸಂಸ್ಥಾಪಕ, ಆರ್ ಶಂಕರ್ ಅವರ ಅಭಿಮಾನಿಗಳ, ಮತ್ತು ಸಾರ್ವಜನಿಕರ ಸಭೆಯು ಮಾರ್ಚ್ 31ರಂದು ರವಿವಾರ ಮುಂಜಾನೆ 10ಗಂಟೆಗೆ ವೀರೇಶ್ವರ ನಗರದಲ್ಲಿರುವ,, ಪಕ್ಷದ ಕಾರ್ಯಾಲಯದಲ್ಲಿ ಕರೆಯಲಾಗಿದೆ ಎಂದು ಅಭಿಮಾನಿಗಳ ಸಂಘದ ಮುಖಂಡ ರತ್ನಾಕರ್ ಕುಂದಾಪುರ ಮತ್ತು ಮಹೇಶ್ ಅಡಿವೆಪ್ಪನವರ್ ಹೇಳಿದರು.
ಇಲ್ಲಿನ ವಿನಾಯಕ ನಗರದ, ಕರಾವಳಿ ಬಳಗ ಸಭಾಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಆರ್ ಶಂಕರ್, ನಾಡು ಕಂಡ ಹಿರಿಯ ರಾಜಕಾರಣಿ, ಅವರಿಗೆ, ಅವರದೇ ಆದ ಸ್ವಾತಂತ್ರ್ಯವಿದೆ, ಆದರೆಅವರು ಅಭಿಮಾನಿಗಳ ಸಭೆ ಕರೆದು, ಯಾವ ಪಕ್ಷಕ್ಕೆಹೋಗಬೇಕು, ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವ ಕುರಿತಂತೆ ಸುಧೀರ್ಘವಾಗಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಚರ್ಚಿಸಿ ಇಂತಿಮ ನಿರ್ಧಾರ ಕೈಗೊಳ್ಳುವರು ಎಂದರು. ಮಾಧ್ಯಮದವರ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅವರು ಸಚಿವರಾಗಿದ್ದಾಗ, ರಾಣೆಬೆನ್ನೂರಿನ ಅಭಿವೃದ್ಧಿಗೆ ಮಾಡಿದ ಕೆಲಸ ಕಾರ್ಯಗಳು ಇನ್ನೂ ಜೀವಂತವಾಗಿವೆ.
ಜನರ ಪರ ನಿಲುವು, ಅವರದಾಗಿದೆ. ಇನ್ನುವರೆಗೂ ಅಧಿಕೃತವಾಗಿ ಯಾವ ಪಕ್ಷಕ್ಕೂ ಸೇರೆ್ಡಯಾಗಿಲ್ಲ. ಅಲ್ಲಿ ಸೇರಿದ್ದಾರೆ ಇಲ್ಲಿ ಸೇರಿದರೆ ಎನ್ನುವುದು ಕೇವಲ ಊಹಾ ಪೋಹ, ಇದು ಕೇವಲ ಮಾಧ್ಯಮದವರ ಸೃಷ್ಟಿ. ಎಲ್ಲ ಪಕ್ಷಗಳಲ್ಲೂ ಅವರಿಗೆ ಕರೆಯಿದೆ. ಅಂತಿಮ ನಿರ್ಧಾರ 31ರಂದು ನಡೆಯುವ ಅಭಿಮಾನಿಗಳ, ಕಾರ್ಯಕರ್ತರ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ರತ್ನಾಕರ ಸ್ಪಷ್ಟಪಡಿಸಿದರು. ಮಾಧ್ಯಮಗೋಷ್ಠಿಯಲ್ಲಿ ಅಭಿಮಾನಿಗಳ ಸಂಘದ ಮುಖಂಡರಾದ, ಎಚ್ ಡಿ ಬಡ ಕರಿಯಪ್ಪನವರ್, ಕೃಷ್ಣಮೂರ್ತಿ ಸುಣಗಾರ, ಪರಶುರಾಮ್, ಮಂಜಪ್ಪ ಹರ್ಡಲ್ಡರ್, ಕುಮಾರ ಸಾಲಗೇರಿ, ಸಾಧಿಕ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.