ಫುಟ್ಪಾತ್ ಮೇಲೆ ಸಾರ್ವಜನಿಕರು ಆಗ್ರಹ
ಫುಟ್ಪಾತ್ ಮೇಲೆ ಸಾರ್ವಜನಿಕರು ಆಗ್ರಹ
ರಾಣೆಬೆನ್ನೂರು 13: ನಗರದ ಮಧ್ಯಭಾಗದಲ್ಲಿರುವ ಹಳೆ ಪಿ.ಬಿ ರಸ್ತೆಯ ಹೊಂಡದ ಪಕ್ಕದಲ್ಲಿ ಇರುವ ಪೊಲ್ ಕಟ್ಟೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯವಿದ್ದು, ಅದರ ಪಕ್ಕದಲ್ಲಿ ವ್ಯಾಪಾರಕ್ಕೋಸ್ಕರ ಒಂದು ಶೆಡ್ಡನ್ನು ಹಾಕಿ ಶಡ್ಡನ ಸುತ್ತಲೂ ಮೇಲ್ ಹೊದಿಕೆ ಹಾಕಲು ತಯಾರಿ ನಡೆಸಿದ್ದಾರೆ. ನಗರಸಭೆ ಅಧಿಕಾರಗಳು ಇತ್ತ ಗಮನಹರಿಸಿ, ಆದಷ್ಟು ಬೇಗ ಅನಧಿಕೃತವಾಗಿ ಇಟ್ಟಿರುವ ಈ ಶೆಡ್ಡನ್ನು ತೆಗೆಸಲು ಮುಂದಾಗಬೇಕೆಂದು. ಎಚ್ಚರಿಸಿದ್ದಾರೆ.. ಇದೇ ರೀತಿ ನಗರದಲ್ಲಿ ಅನೇಕ ಭಾಗಗಳಲ್ಲಿನ ಫುಟ್ಪಾತ್ ಮೇಲೆ ಅನೇಕ ಶಡ್ಡುಗಳಿದ್ದು ಅವುಗಳತ್ತ ಕೂಡ ಗಮನ ಕೊಡಬೇಕೆಂದು ಕರವೇ ಕನ್ನಡ ಸೇನೆ ಸಂಘಟನೆ ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.