ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಮಲ್ಲೂರ
ಬೈಲಹೊಂಗಲ 13: ಪೊಲೀಸರನ್ನು ಕಂಡರೆ ಭಯ ಪಡುವ ಅಗತ್ಯವಿಲ್ಲ. ಕೇವಲ ಪೊಲೀಸರಿಂದ ಅಪರಾಧ ಪತ್ತೆ ಹಚ್ಚಿ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಯಾವುದೇ ಅಪರಾಧ ಪ್ರಕರಣಗಳು ಗಮನಕ್ಕೆ ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪಿಎಸೈ ಎಫ್ ವೈ ಮಲ್ಲೂರ ಹೇಳಿದರು.
ಅವರು ಪಟ್ಟಣದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾತನಾಡಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಡಿ.1 ರಿಂದ 31 ವರೆಗೂ ಈ ಕಾರ್ಯಕ್ರಮ ನಡೆಯುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಪೊಲೀಸ ಇಲಾಖೆಗೆ ಸಹಕಾರ ನೀಡಬೇಕೆಂದರು.
ಸಿಬ್ಬಂದಿಗಳಾದ ಎಂ.ಎಸ್.ದೇಶನೂರ, ಚೇತನ ಬುದ್ನಿ, ಯು.ಎಚ್.ಪೂಜೇರಿ ಹಾಗೂ ಸಾರ್ವಜನಿಕರು ಇದ್ದರು.