ರಾಣೆಬೆನ್ನೂರ

ಹೆಲ್ಮೆಟ್ ಜಾಗೃತಿಗಾಗಿ ಯಮನಾದ ಪೊಲೀಸ್‌..!!

ಹೆಲ್ಮೆಟ್ ಜಾಗೃತಿಗಾಗಿ ಯಮನಾದ ಪೊಲೀಸ್‌..!!

ರಾಣೆಬೆನ್ನೂರ 07: ಅಮೂಲ್ಯವಾದ ಜೀವವನ್ನು ಸಂರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಎಲ್ಲಾ ಬೈಕ್  ಸವಾರರು ಕಡ್ಡಾಯವಾಗಿ ಹೆಲ್ಮೆಟ್ಟನ್ನು ಹಾಕಿಕೊಳ್ಳಬೇಕೆಂದು  ಜನ ಜಾಗೃತಿ ಮೂಡಿಸುವುದರ ಜೊತೆಗೆ ಹೆಲ್ಮೆಟ್  ಧರಿಸದೆ ಜೀವ  ಕಳೆದುಕೊಂಡ ಉದಾಹರಣೆ ಮೂಲಕ ಪೊಲೀಸರು ವೇಷಧಾರಿಗಳಾಗಿ ರೂಪಕದ ಮೂಲಕ ಜನರಲ್ಲಿ ಅರಿವು ಮೂಡಿಸಿದರು.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನ್ಷುಕುಮಾರ್ ಹಾಗೂ ನ್ಯಾಯಾಲಯದ ಸೂಚನೆಯ ಮೇರೆಗೆ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸೋಮವಾರದಂದು ಇಲ್ಲಿನ ಬಸ್ ನಿಲ್ದಾಣ ಮತ್ತು ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸರು ವೇಷಧಾರಿಗಳಾಗಿ "ಭೂಲೋಕದ ಯಮ" ರೂಪಕದ ಮೂಲಕ ಜಾಗೃತಿ  ಮೂಡಿಸಿದರು. ಹೆಡ್ ಕಾನ್ಸ್ಟೇಬಲ್ ವಿಜಿ ಹಿರೇಮಠ ಯಮನಾಗಿ ಕಾನ್ಸ್ಟೇಬಲ್ ವಿಠಲ್ ಡಿಬಿ ಚಿತ್ರಗುಪ್ತನಾಗಿ, ಕು. ಗೋಕುಲ್ ಯಮಕಿಂಕರನಾಗಿ ಹಾಗೂ ಕಾನ್ಸ್ಟೇಬಲ್ ಕೃಷ್ಣಾರೆಡ್ಡಿ ನಿರ್ದೇಶನದ ಮೂಲಕ ರೂಪಕ ನಡೆಸಲಾಯಿತು. ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ ಹಾಗೂ ದೊಡ್ಡಮನಿ ಸೇರಿದಂತೆ ಪೊಲೀಸ್ ಅಧಿಕಾರಿಗಳ, ಪೇದೆಗಳ ಸಮ್ಮುಖದಲ್ಲಿ ಪೊಲೀಸರು ರೂಪಕ ನಡೆಸಿಕೊಟ್ಟರು.  

ಇದೇ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ ಸವಾರರಿಗೆ ಸನ್ಮಾನಿಸಲಾಯಿತು. ಹೆಲ್ಮೆಟ್ ಇಲ್ಲದ 25ಕ್ಕೂ ಅಧಿಕ ಸವಾರರಿಗೆ ದಂಡ ವಿಧಿಸಲಾಯಿತು 


ಸುದ್ದಿ ಓದಿ