ರಾಣೆಬೆನ್ನೂರ

ಜನರ ಸಹಕಾರದಿಂದ ಸಾರ್ವಜನಿಕ ಗಣೇಶೋತ್ಸವ ಯಶಸ್ವಿ: ಮಣಿ ಪವಾರ್

ಜನರ ಸಹಕಾರದಿಂದ ಸಾರ್ವಜನಿಕ ಗಣೇಶೋತ್ಸವ ಯಶಸ್ವಿ: ಮಣಿ ಪವಾರ್

ರಾಣೆಬೆನ್ನೂರು 28:  ವಾಣಿಜ್ಯ ನಗರದಲ್ಲಿ ಎಂದಿನಿಂದಲೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಇರಲಿಲ್ಲ, ಕೇವಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು ಹೀಗಾಗಿ ಈ ಬಾರಿ  ನಗರದ ಗಣ್ಯ ವ್ಯಕ್ತಿಗಳು, ಸಂಘ-ಸಂಸ್ಥೆಗಳ ಮುಖಂಡರು  ಸಾಮಾಜಿಕ ಚಿಂತಕರು, ಸಮರ್ಪಕವಾಗಿ ಚಿಂತನೆ ನಡೆಸುವುದರ ಮೂಲಕ ವಿರಾಟ್ ಹಿಂದೂ ಮಹಾಸಭಾ ಸಮಿತಿ ರಚಿಸಿ, ಆದರ ಮೂಲಕ, ಅಶೋಕ ವೃತ್ತದಲ್ಲಿ ಪ್ರಥಮ ಬಾರಿಗೆ ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ  ಯಶಸ್ವಿ ಕಂಡಿದ್ದೇವೆ ಎಂದು ಸಮಿತಿ ಅಧ್ಯಕ್ಷ ನಾಗರಾಜ್ ಪವಾರ್ ಮತ್ತು ಪರಮೇಶಪ್ಪ ಗೂಳಣ್ಣನವರ ಹೇಳಿದರು. ಅವರು ಮಂಗಳವಾರ ಸಂಜೆ ಪ್ರವಾಸಿ.ಮಂದಿರದಲ್ಲಿ ನಡೆದ ಯಶಸ್ವಿ ಯಶಸ್ವಿ ಕಾರ್ಯಕ್ರಮದ  ಸರ್ವರ ಅಭಿನಂದನಾ ಸಮರ್ಪಣಾ ಮಹಾಸಭೆಯಲ್ಲಿ ಮಾತನಾಡಿದರು. ಈ ಸಮಿತಿಯು ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿ ಯಾವುದೇ ಜಾತಿ ಮತ ಬೇಧ ಭಾವವಿಲ್ಲ.ಇಲ್ಲಿ ಸಮಾಜದ ಗಣ್ಯರು, ಸಾಮಾಜಿಕ ಕಾರ್ಯಕರ್ತರು ಯುವ ಸೇವಾ ದು ರಿಣರು ಇದ್ದಾರೆ. ಎಲ್ಲರೂ ಕಾಯಾ-ವಾಚಾ-ಮನಸಾ ಸೇವೆ  ಸಲ್ಲಿಸುವವರಾಗಿದ್ದಾರೆ.ಹೀಗಾಗಿ ಪ್ರಥಮ ವರ್ಷದ ಕಾರ್ಯಕ್ರಮವು,ಜನ ಮೆಚ್ಚುವ ರೀತಿಯಲ್ಲಿ ನಡೆಸಲಾಗಿದೆ ಎಂದರು. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಯಾರೇ ಶಾಸಕರಾಗಿರಲಿ ಅವರು ಈ ಮಹಾ ಸಮಿತಿಗೆ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದ ಗೂಳಣ್ಣನವರ ಅವರು, ಮಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗಣೇಶೋತ್ಸವ ಧಾರ್ಮಿಕ  ಜಾಗೃತಿ  ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ, ಬಸವರಾಜ ಚಳಗೇರಿ, ಮಲ್ಲಣ್ಣ ಅಂಗಡಿ, ಪವನ್ ಮಲ್ಲಾಡದ, ಮಾಳಪ್ಪ ಪೂಜಾರ, ಜಗದೀಶ್ ಎಲಿಗಾರ್, ಅಮೋಘ  ಬದಾಮಿ, ಅನಿಲ್ ಸಿದ್ದಾಳಿ, ಶಿವಪುತ್ರಪ್ಪ ಹಲಗೇರಿ, ರಾಯಣ್ಣ ಮಾಕನೂರು, ಮುತ್ತುರಾಜ ಕಾಕೋಳ, ಆನಂದ್ ಇಟಗಿ, ಶ್ರೀನಿವಾಸ ಹಳ್ಳಳ್ಳಿ, ಬಣಕಾರ್, ಪ್ರಶಾಂತ್ ಕಬ್ಬಾರ, ಪ್ರಕಾಶ ಪೂಜಾರ, ನಾಗರಾಜ ಗೌಳಿ, ಸೋಮು ಗೌಡ ಶಿವಣ್ಣನವರ, ವಿನಾಯಕ ಮೋರಗೇರಿ, ಪ್ರಶಾಂತ ಕೊಪ್ಪದ, ರಮೇಶ ಸೇರಿದಂತೆ  ಮತ್ತಿತರ ಗಣ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ