ಧಾರವಾಡ - ಹುಬ್ಬಳ್ಳಿ

ಪಂ.ಚಂದ್ರಶೇಖರ ಪುರಾಣಿಕಮಠ ಪುಣ್ಯಸ್ಮರಣೋತ್ಸವ ಸಂಗೀತೋತ್ಸವ

ಪಂ.ಚಂದ್ರಶೇಖರ ಪುರಾಣಿಕಮಠ ಪುಣ್ಯಸ್ಮರಣೋತ್ಸವ ಸಂಗೀತೋತ್ಸವ

ಧಾರವಾಡ 25:  ಧಾರವಾಡದ ಪಂ.ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಂಗೀತ ಸಭಾ ವತಿಯಿಂದ ದಿನಾಂಕ: 28ರಂದು ಬೆಳಗ್ಗೆ 10ಗಂಟೆಗೆ ಪಂ.ಚಂದ್ರಶೇಖರ ಪುರಾಣಿಕಮಠ ಅವರ 14ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ನಗರದ ಸಾಧನಕೇರಿಯ ಪ್ರಶಾಂತನಗರದ ಗುರುಕೃಪಾ ಸಭಾಭವನದಲ್ಲಿ ಏರಿ​‍್ಡಸಲಾಗಿದೆ.   

ಮುಖ್ಯಅತಿಥಿಗಳಾಗಿ ಕವಿವಿ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಅಮ್ಮಿನಭಾವಿ ಆಗಮಿಸುವರು, ಸಮಾರಂಭದ ಅಧ್ಯಕ್ಷತೆಯನ್ನು ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವಹಿಸುವರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಂಗೀತ ಸಭಾದ ಗೌರವಾಧ್ಯಕ್ಷ ಎನ್‌.ಟಿ.ಪರಾಂಜಪೆ, ಉಪಾಧ್ಯಕ್ಷೆ ಡಾ.ಸೌಭಾಗ್ಯ ಕುಲಕರ್ಣಿ, ಕಾರ್ಯದರ್ಶಿ ಶಿವಯೋಗಿ ಪುರಾಣಿಕಮಠ  ಉಪಸ್ಥಿತರಿರುವರು.  ಇದೇ ಸಂದರ್ಭದಲ್ಲಿ ಹಿರಿಯ ಹಿಂದೂಸ್ತಾನಿ ಗಾಯಕ ಪಂ.ಅಶೋಕ ಹುಗ್ಗಣ್ಣವರ ಅವರನ್ನು ಸನ್ಮಾನಿಸಲಾಗುವುದು.   

ವಿದುಷಿ ಭಾರ್ಗವಿ ಕುಲಕರ್ಣಿ ಅವರ ಸುಗಮ ಸಂಗೀತ, ಪಂ.ಅಶೋಕ ಹುಗ್ಗಣ್ಣವರ ಅವರ ಶಾಸ್ತ್ರೀಯ ಗಾಯನ ಹಾಗೂ ಪಂ.ಚಂದ್ರಶೇಖರ ಪುರಾಣಿಕಮಠ ಅವರ ಶಿಷ್ಯವೃಂದದಿಂದ ಗಾಯನ ಕಾರ್ಯಕ್ರಮ ಜರುಗುವುದು.  ತಬಲಾದಲ್ಲಿ ಪಂ.ಅಲ್ಲಮಪ್ರಭು ಕಡಕೋಳ, ಭೂಷಣ ಗುಡ್ಡದಮಠ, ಜಯತೀರ್ಥ ಪಂಚಮುಖಿ ಹಾಗೂ ಹಾರ್ಮೊನಿಯಂದಲ್ಲಿ ಡಾ.ಪರಶುರಾಮ ಕಟ್ಟಿಸಂಗಾವಿ ಹಾಗೂ ಪ್ರಮೋದ ಹೆಬ್ಬಳ್ಳಿ ಸಾಥ್ ಸಂಗತ ನೀಡುವರು ಎಂದು ಸಂಗೀತ ಸಭಾದ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ