ಗುಳೇಗುಡ್ಡ

ಕಕ್ಷಿದಾರರಿಗೆ ಸೂಕ್ತ ನ್ಯಾಯ ಒದಗಿಸಿ: ನ್ಯಾಯಾಧೀಶೆ ಶುಷ್ಮಾ

ಕಕ್ಷಿದಾರರಿಗೆ ಸೂಕ್ತ ನ್ಯಾಯ ಒದಗಿಸಿ: ನ್ಯಾಯಾಧೀಶೆ ಶುಷ್ಮಾ

ಗುಳೇದಗುಡ್ಡ 09: ತಮ್ಮ ಸಾಕಷ್ಟು ನೋವು, ಕಷ್ಟದೊಂದಿಗೆ ತಮ್ಮಲ್ಲಿಗೆ ಬರುವ ಪ್ರತಿಯೊಬ್ಬ ಕಕ್ಷಿದಾರರಿಗೆ ಎಲ್ಲ ನ್ಯಾಯವಾದಿಗಳು ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಶುಷ್ಮಾ ಟಿ.ಸಿ. ನ್ಯಾಯವಾದಿಗಳಿಗೆ ಸಲಹೆ ನೀಡಿದರು.

ಸೋಮವಾರ ಸ್ಥಳೀಯ ಕೋರ್ಟಿಗೆ ನೂತನ ನ್ಯಾಯಾಧೀಶರಾಗಿ ಬಂದ ಪ್ರಯುಕ್ತ ಹೊಸ ನ್ಯಾಯಾಧೀಶರಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿ, ಕೊರೊನಾದಿಂದಾಗಿ ಗುಳೇದಗುಡ್ಡದ ಕೋಟ್ ಕಲಾಪಗಳು ಕಳೆದ 10 ತಿಂಗಳಿಂದ ಸ್ಥಗಿತವಾಗಿತ್ತು. ಇದರಿಂದ ಕಕ್ಷಿದಾರರಿಗೆ ಸಾಕಷ್ಟು ತೊಂದರೆಯಾಗಿದ್ದು ಈಗ ಎಂದಿನಂತೆ ಪ್ರತಿ ಸೋಮವಾರ, ಮಂಗಳವಾರ ಕೋರ್ಟ ಕಲಾಪಗಳು ನಡೆಯಲಿವೆ ಎಂದು ಅವರು ಹೇಳಿದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ, ಗುಳೇದಗುಡ್ಡ ತಾಲೂಕು ವಕೀಲರ ಸಂಘದ ಅಧ್ಯಕ್ಷ ಗಂಗಾಧರ ರಾಂಪೂರ, ಉಪಾಧ್ಯಕ್ಷ ಎಸ್.ಎಸ್.ಅಂಗಡಿ, ಕಾರ್ಯದರ್ಶಿ ಸುಭಾಸ ಹೊಸಮನಿ, ಕೆ.ಟಿ.ಪವಾರ್, ಜಿ.ಆಯ್.ಮೇಟಿ, ಎಸ್.ಆರ್.ಬರಹಾನಪೂರ, ಜಿ.ಬಿ.ತೋಳಮಟ್ಟಿ, ಪುಂಡಲೀಕ ಬಡಿಗೇರ, ಶಕೀಲ ಕಂಟ್ರಾಕ್ಟರ್ ಸೇರಿದಂತೆ ಇತರೆ ವಕೀಲರು ಈ ಸಂದರ್ಭದಲ್ಲಿ ಇದ್ದರು.

ಸುದ್ದಿ ಓದಿ