ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸದಿದ್ದರೆ ಜ.25 ರಂದು ಧರಣಿ
ಶಿಗ್ಗಾವಿ 23: ಸಂವಿಧಾನ ಶೀಲ್ಪಿ ಡಾ. ಬಿ ಆರ್ ಅಂಬೇಡ್ಕರರ ಪ್ರತಿಮೆಯನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪನೆ ಮಾಡಬೇಕು ಇಲ್ಲದಿದ್ದರೆ ಇದೇ ಜ 25 ರಂದು ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಡಾ. ಬಿ ಆರ್ ಅಂಬೇಡ್ಕರರ ಮೂರ್ತಿ ಹೋರಾಟ ಸಮಿತಿಯ ಹನಮಂತಪ್ಪ ಬಂಡಿವಡ್ಡರ ಹಾಗೂ ಬಾಬಕ್ಕ ಬಳ್ಳಾರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ತಾಪಂನ ಖಾಲಿ ಜಾಗವಾದ ಹಳೇ ಬಸ್ ನಿಲ್ದಾಣದಲ್ಲಿ ಇದೇ ಜ 25 ರಂದು ಮುಂಜಾನೆ 10 ಗಂಟೆಯಿಂದ ಅಂಬೇಡ್ಕರರ ಮೂರ್ತಿ ಪ್ರತಿಷ್ಠಾಪನೆಯಾಗುವ ವರೆಗೆ ನಿರಂತರವಾಗಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ, ಈ ಹೋರಾಟದಲ್ಲಿ ಬುದಿಜೀವಿಗಳು, ಅಂಬೇಡ್ಕರರ ಅಭಿಮಾನಿಗಳು, ದಲಿತ ಸಂಘಟನೆಗಳು ಹಾಗೂ ರೈತ ಮುಂಖಡರು ಭಾಗಿಯಾಗುವರು.
ನಿರಂತರವಾಗಿ ಸುಮಾರು 20 ವರ್ಷಗಳಿಂದ ಸುಳ್ಳು ಆಶ್ವಾಸನೆಯಲ್ಲಿ ನಮ್ಮ ಜನಪ್ರತಿನಿಧಿಗಳು ಮುಳುಗಿದ್ದಾರೆ ಆದರಿಂದ ಕೂಡಲೇ ಜಿಲ್ಲಾಧಿಕಾರಿಗಳಿಂದ ಠರಾವು ಪಾಸು ಮಾಡಿ ಸೂಚಿಸಿದ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.