ಸರಕಾರಿ ಶಾಲೆಯ ಜಾಗದ ದಾಖಲೆ ನೀಡುವಂತೆ ಧರಣಿ
ಕಾಗವಾಡ,25: ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿನ ಆಸ್ತಿ ಸಂಖ್ಯೆ 792 ಜಾಗದ ಉತಾರ ಹಾಗೂ ಚಕ್ಕಬಂದಿ ನೀಡುವಂತೆ ಕರವೇ ತಾಲೂಕು ಗೌರವಾಧ್ಯಕ್ಷ ಶಿವಾನಂದ ನವಿನಾಳೆ ಗುರುವಾರ ದಿ. 25 ರಂದು ತಾಲೂಕು ಪಂಚಾಯತ ಎದರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ಗ್ರಾಮದ ಆಸ್ತಿ ಸಂಖ್ಯೆ 792 ರಲ್ಲಿ ಸರಕಾರಿ ಉರ್ದ ಶಾಲೆಯ ಇದ್ದು ಅದರ ಸುತ್ತಮುತ್ತಲಿನ ಜಾಗವನ್ನು ಕೆಲವು ಸ್ಥಳೀಯ ರಾಜಕೀಯ ನಾಯಕರು ಅತಿಕ್ರಮಣ ಮಾಡಿದ್ದು, ಶಾಲಾ ಮಕ್ಕಳಿಗೆ ಅಂತ ಮೀಸಲು ಇರುವ ಜಾಗದಲ್ಲಿ ಅತಿಕ್ರಮಣ ಆಗಿದ್ದು ಅದರ ಮೂಲ ದಾಖಲೆಗಳನ್ನು ನೀಡಬೇಕು. ಮತ್ತು ಆ ಅತಿಕ್ರಮಣ ಆಗಿರುವುದನ್ನು ತೆರವುಗೊಳಿಸಿಬೇಕು. ಅದು ಆಗುವ ವರಗೆ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಹೇಳಿದರು.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ತಹಶಿಲ್ದಾರ ರಾಜೇಶ ಬುರ್ಲಿ ಹಾಗೂ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ವಾಲಿ ಎಲ್ಲ ಆಸ್ತಿಗೆ ಸಂಭಂದಿಸಿದ ಎಲ್ಲ ದಾಖಲೆಗಳನ್ನು ಗ್ರಾಮ ಪಂಚಾಯತಯಿಂದ ಕಲೆಹಾಕಿ ನೀಡಿದರು. ದಾಖಲೆ ಸ್ವೀಕರಿಸಿದ ಶಿವಾನಂದ ಅತಿಕ್ರಮಣ ಆಗಿರುವ ಸರಕಾರಿ ಶಾಲೆಯ ಜಾಗವನ್ನು ಸರ್ವೆ ಮಾಡಿಸಿ, ಅತಿಕ್ರಮಣ ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿ, ಸತ್ಯಾಗ್ರಹ ಅಂತ್ಯಗೊಳಿಸಿದರು.