ಅಥಣಿ

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಸ್ಥಗಿತಗೊಂಡು 15 ದಿನಗಳೇ ಕಳೆದರೂ ಕ್ಯಾರೇ ಎನ್ನದ ಗ್ರಾಪಂ

ಸಂಬರಗಿ 24: ಜಂಬಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು 15  ದಿನಗಳೇ ಕಳೆದರೂ ಸಹ ಇನ್ನೂ ದುರಸ್ಥಿಗೊಂಡಿಲ್ಲ ಶೀಘ್ರದಲ್ಲಿ ದುರಸ್ಥಿಮಾಡಲು ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕದ ಎದುರಿಗೆ ಪ್ರತಿಭಟನೆ ಮಾಡಿ ಗ್ರಾಮಪಂಚಾಯತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜಂಬಗಿ ಗ್ರಾಮದ ಜನಸಂಖ್ಯೆ ಸುಮಾರು 3000 ಇದ್ದು, ಗ್ರಾಮದಲ್ಲಿ ಒಂದೇ ಶುದ್ಧಕುಡಿಯುವ ನೀರಿನ ಘಟಕ ಇದ್ದು, ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಈ ಕುರಿತು ಸಂಬಂಧಪಟ್ಟ ಅಧಿಕಾರಿ ಗಮನಕ್ಕೆ ತಂದರು ಸಹ ಇನ್ನೂವರೆಗೆ ಪ್ರಾರಂಭವಾಗಿಲ್ಲ. ಗ್ರಾಮಸ್ಥರು ರೊಚ್ಚಿಗೆದ್ದು ಪ್ರತಿಭಟನೆ ಮಾಡಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಗ್ರಾಮದ ಯುವ ಮುಖಂಡ ಬಾನುದಾಸ ಪಾಟೀಲ ಮಾತನಾಡಿ ಗ್ರಾಮಕ್ಕೆ ಒಂದೇ ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಅದು ಸರಿಯಾಗಿ ನಡೆಯುತ್ತಾಯಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಬೇರೆ ಗ್ರಾಮದಿಂದ ತರಬೇಕಾಗುತ್ತದೆ. ಮೇಲಾಧಿಕಾರಿಗಳು ಗಮನ ಹರಿಸಿ ಶೀಘ್ರದಲ್ಲಿ ದುರಸ್ಥಿಗೊಳಿಸಬೇಕು ಇಲ್ಲವಾದರೆ ಗ್ರಾಮಪಂಚಾಯತ ಎದುರಿಗೆ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಚ್ಚೇಂದ್ರ ಕಾಳೆ, ಚಿದಾನಂದ ಮಾಳಿ, ರಾಜು ಸೈಯದ, ಸಿಕಂದರ ಪಟೇಲ, ಸಾಗರ ಕೋಳೆಕರ, ಸುಧಾಕರ ಮಾಳಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು 

ಸುದ್ದಿ ಓದಿ