ರಾಣೆಬೆನ್ನೂರ

ರಸಗೊಬ್ಬರ ಸಮರ್ಪಕವಾಗಿ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ

ರಸಗೊಬ್ಬರ ಸಮರ್ಪಕವಾಗಿ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ

ರಾಣೇಬೆನ್ನೂರು 26:  ನಗರದ ಎ.ಪಿ. ಎಮ್‌. ಸಿ, ಮಾರುಕಟ್ಟೆಯಲ್ಲಿರುವ ಸೊಸೈಟಿಯಲ್ಲಿ ರೈತರಗೆ ಅವಶ್ಯಕತೆ ಇರುವ 10.26.26. ಡಿ.ಎ. ಪಿ. ಮತ್ತು ಯೋರಿಯಾ ರಸಗೊಬ್ಬರ ಪೂರೈಕೆಯಾಗುತ್ತಿಲ್ಲಾ ಇದರಿಂದ ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ. ಹಾವೇರಿ ಜಿಲ್ಲೆಯಾದ್ಯಂತ, ನಿನ್ನೆ ಸುರಿದ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಹಳ್ಳಿಗಳಿಂದ ರೈತರು ರಸ ಗೊಬ್ಬರಕ್ಕಾಗಿ  ಸೊಸೈಟಿ ಮುಂದೆ ನಿಂತು ಗೋಗರಿದರೂ ರೈತರಿಗೆ ಸಮರ​‍್ಕ ರಸಗೊಬ್ಬರ ಸಿಗುತ್ತಿಲ್ಲ. ಕೂಡಲೇ ರಸಗೊಬ್ಬರ, ಸಮರ​‍್ಕವಾಗಿ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಹುಲ್ಲತ್ತಿ ಗ್ರಾಮದ ರೈತರು ಪ್ರತಿಭಟಿಸಿದರು.  

ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಹಾವೇರಿ ಜಿಲ್ಲೆಯ ಎಲ್ಲಾ ರೈತ ಬಾಂಧವರಿಗೆ 2024 ನೇ ಸಾಲಿನ ಮುಂಗಾರು ಹಂಗಾಮಿಗೆ ಬೀಜ ರಸಗೊಬ್ಬರಗಳ ದಾಸ್ತಾನು ಸಂಗ್ರಹಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ತಿಳಿಸಿದ್ದಾರೆ ಆದರೆ ಇಲ್ಲಿ ರೈತರು ಬಂದು ಗೊಬ್ಬರಕ್ಕಾಗಿ ಸೊಸೈಟಿ ಮುಂದೆ ಭಿಕ್ಷೆ ಬೇಡುವಂತಾಗಿದೆ.. 2003ರ ಹಿಂಗಾರು ಮತ್ತು ಮುಂಗಾರಿನಲ್ಲಿ ನೀರೀಕ್ಷಿತ ಪ್ರಮಾಣದಲ್ಲಿ ಮಳೆ ಯಾಗದ ಪರಿಣಾಮ  ರೈತರು ಕೃಷಿ ಚಟುವಟಿಕೆಗಳಿಗೆ ಮಾಡಿದ ಸಾಲವು ಹಾಗೆ ಉಳಿದಿದೆ ಈ ವರ್ಷ ಮುಂಗಾರು ಸ್ವಲ್ಪ ಚುರುಕುಗೊಂಡಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ದಿನೇ ದಿನೇ ರೈತರು ರಸಗೊಬ್ಬರಕ್ಕಾಗಿ ಅಲೆದಾಡುವಂತಾಗಬಾರದು ಆದ್ದರಿಂದ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸಮರ​‍್ಕ ರಸಗೊಬ್ಬರ ಪೂರೈಕೆ ಮಾಡಬೇಕು.  

ಹಾವೇರಿ ಜಿಲ್ಲೆಯಲ್ಲಿ 2007 ಅಂದಿನ ಸರ್ಕಾರ ಬೀಜ ರಸ ಗೊಬ್ಬರಗಳ ಪೂರೈಕೆಯಲ್ಲಿ ಸಂಪೂರ್ಣ ವಿಳಂಬವಾಗಿದ್ದರಿಂದ ಅನ್ನದಾತರು ಬೀದಿಗಿಳಿದು ಹೋರಾಡಬೇಕಾಯಿತು ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಗೋಲಿಬಾರ್ ಮಾಡಿ ರೈತರನ್ನ ಹತ್ಯೆ ಮಾಡಲಾಯಿತು. ಅಂತಹ ಕರಾಳ ದಿನಗಳು ಮರುಕಳಿಸಬಾರದು ಎನ್ನುವ ದೂರ ದೃಷ್ಟಿಯಿಂದ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಗೆ ಸಮರ​‍್ಕ ರಸಗೊಬ್ಬರ ಬೀಜ ಪೂರೈಕೆ ಮಾಡಬೇಕು ಎಂದು ರೈತ ಮುಖಂಡರಾದ ಜಗದೀಶ್ ಕೆರೋಡಿ.ನಂದೇಪ್ಪ  ಗುಗ್ಗರಿ. ಮಾರುತಿ ದೊಡ್ಡಮನಿ. ಕಾಂತೇಶ್ ಗುಗ್ಗರಿ.ಕಲ್ಲಪ್ಪ ಗುತ್ತಲ. ಸೋಮಣ್ಣ ಬೇವಿನಹಳ್ಳಿ. ಮಂಜಪ್ಪ ಗುಗ್ಗರಿ ಲೋಕಣ್ಣ ಎಲೆಗಾರ. ಮಲ್ಲೇಶ್ ಗುಗ್ಗರಿ. ತಿಮ್ಮಪ್ಪ ನಾಯಕ್‌. ಕಿರಣ್ ಲಮಾಣಿ. ಬದಲಾದವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ