ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ಪ್ರತಿಭಟನೆ ರ್ಯಾಲಿ
ಇಂಡಿ 20: ಸದಾಶಿವ ಆಯೋಗದ ವರದಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು. ವರದಿ ಜಾರಿಯಾದರೆ ಕೆಲ ಕೆಳ ಸಮಾಜದವರಿಗೆ ತುಂಬಾ ಅನ್ಯಾಯವಾಗುತ್ತದೆ. ರಾಜ್ಯ ಸರಕಾರ ಈ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟು ಸರ್ವರ ಸಮ್ಮತಿ ಪಡೆದು ನಂತರ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ ಅಲ್ಲಿವರೆಗೆ ಇದನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಪದಾಧಿಕಾರಿಗಳು ರಾಜ್ಯ ಸರಕಾರಕ್ಕೆ ಬರೆದ ಮನವಿ ಪತ್ರವನ್ನು ಸೋಮವಾರ ಗ್ರೇಡ್-2 ತಹಸೀಲ್ದಾರ ಎಸ್.ಆರ್. ರೇವಡಿಗಾರ ಅವರಿಗೆ ಸಲ್ಲಿಸಿದರು.
ಪ್ರತಿಭಟನೆ ರ್ಯಾಲಿಯ ನೇತೃತ್ವವಹಿಸಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ರಾಮ ಜಾಧವ ಮಾತನಾಡಿ, ಮಾದಿಗ ದಂಡೋರ ಸಮಿತಿಯ ಕೆಲ ಕಿಡೆಗೇಡಿಗಳು ವಿನಾಕಾರಣ ಸದಾಶಿವ ವರದಿ ಹೋರಾಟದಲ್ಲಿ ನಮ್ಮ ಧರ್ಮಗುರುಗಳನ್ನು ವಿನಾಕಾರಣ ಎಳೆದುತಂದು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ್ದಾರೆ. ರಾಜ್ಯ ಸರಕಾರ ಕೂಡಲೆ ಆ ದುಷ್ರ್ಕಮಿಗಳನ್ನು ಬಂಧಿಸಬೇಕು ನಮ್ಮ ಸಮಾಜಕ್ಕೆ ಆದ ಅವಮಾನಕ್ಕೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.
ರಾಜ್ಯ ಕಾರ್ಯಕಾರಣಿ ಸದಸ್ಯ ಹೇಮಂತ ರಾಠೋಡ ಮಾತನಾಡಿ ಬಂಜಾರ ಸಮಾಜ ಮೂಲತ: ಶಾಂತಿ ಪ್ರೀಯ ಸಮಾಜವಾಗಿದೆ. ಹಾಗಂತ ನಮ್ಮ ಸಹನೆಯನ್ನು ಕೆಣಕಬೇಡಿ. ನಾವು ಶಾಂತಿಗೂ ಸಿದ್ಧ ಕ್ರಾಂತಿಗೂ ಬದ್ಧ ಅನ್ನೋದನ್ನು ಮರೆಯಬಾರದು ಎಂದು ಎಚ್ಚರಿಸಿದರು.
ಸಮಾಜದ ಮುಖಂಡ ಮಹೇಶ ನಾಯ್ಕ ಮಾತನಾಡಿ ಇಂದು ನಾವು ಹಮ್ಮಿಕೊಂಡ ಹೊರಾಟ ಕೇವಲ ಸಾಂಕೇತಿಕ. ಸರಕಾರ ಕಿಡೆಗೇಡಿಗಳನ್ನು ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ಡಾ. ರವಿದಾಸ ಜಾಧವ ಮತನಾಡಿ. ದಾವಣೇಗೆರಿ ಜಿಲ್ಲಾ ನ್ಯಾಯತಿಯಲ್ಲಿ ಮಾದಿಗ ದಂಡೋರ ಸಮಿತಿಯವರು ನಮ್ಮ ಧರ್ಮಗುರುಗಳನ್ನು ಏಕವಚನದಲ್ಲಿ ನಿಂದಿಸಿರುವದನ್ನು ನಮ್ಮ ಸಮಾಜ ಬಲವಾಗಿ ಖಂಡಿಸುತ್ತದೆ. ಅಂಥ ಕಿಡಿಗೇಡಿಗಳನ್ನು ಕೊಡಲೇ ಬಂಧಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಶೇಖರ ನಾಯ್ಕ, ಬಾಬು ಪವಾರ, ಮಹಿಳಾ ಘಟಕದ ಅಧ್ಯಕ್ಷೆ ಶೈಲಶ್ರೀ ಜಾಧವ ಮಾತನಾಡಿದರು.
ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಜಾಧವ, ಯುವ ಘಟಕದ ಜಿಲ್ಲಾಪ್ರಧಾನ ಕಾರ್ಯದರ್ಶಿ ಸುನೀಲ ರಾಠೋಡ, ತಾಲೂಕಾ ಯುವ ಘಟಕದ ಅಧ್ಯಕ್ಷ ರಾಜು ಪವಾರ, ರಾಜಶೇಖರ ಪವಾರ, ವಿಜಯ ರಾಠೋಡ, ಮೋಹನ ರಾಠೋಡ, ಸಂಜು ಜಾಧವ, ಅಶೋಕ ರಾಠೋಡ, ಕುಮಾರ ರಾಠೋಡ, ವಿನೋದ ಚವ್ಹಾಣ, ಕಪೀಲ ಜಾಧವ, ಸುಭಾಷ ರಾಠೋಡ, ವಿವೇಕ ರಾಠೋಡ, ದಶರಥ ರಾಠೋಡ, ಗಂಗುಬಾಯಿ ರಾಠೋಡ, ಕಾಶೀನಾಥ ರಾಠೋಡ, ಉಮೇಶ ರಾಠೋಡ, ಅಭಿಷೇಕ ರಾಠೋಡ, ಪಂಡಿತ ನಾಯಕ, ಬಾಳು ರಾಠೋಡ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.