ಹೂವಿನ ಹಡಗಲಿ

ಅಭ್ಯರ್ಥಿ ಬದಲಾವಣೆಗೆ ಬಿಜೆಪಿ ಕಚೇರಿ ಎದುರು ಪ್ರತಿಭಟನೆ

ಅಭ್ಯರ್ಥಿ ಬದಲಾವಣೆಗೆ  ಬಿಜೆಪಿ ಕಚೇರಿ ಎದುರು ಪ್ರತಿಭಟನೆ

ಹೂವಿನಹಡಗಲಿ 14: ಬಿಜೆಪಿ ಪಕ್ಷದಲ್ಲಿ ದುಡಿದವರಿಗೆ ಕಡೆಗಣಿಸಿ, ಈಚೆಗೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಸೇರೆ​‍್ಡಯಾಗಿರುವ ಕೃಷ್ಣನಾಯ್ಕ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿರುವುದನ್ನು ವಿರೋಧಿಸಿ ಪ್ರಮುಖ ಆಕಾಂಕ್ಷಿಗಳ ಬೆಂಬಲಿಗರು ಪಟ್ಟಣದಲ್ಲಿ ಗುರುವಾರ ಬೈಕ್ ರಾ​‍್ಯಲಿ ಮೂಲಕ ಪ್ರತಿಭಟನೆ ನಡೆಸಿದರು. 

ಪಟ್ಟಣದ ಶಾಸ್ತ್ರಿ ವೃತ್ತದಿಂದ ಬೈಪಾಸ್ ರಸ್ತೆಯಲ್ಲಿ ಬಿಜೆಪಿ ಕಚೇರಿವರೆಗೆ ಬೈಕ್ ರಾ​‍್ಯಲಿ ಮೂಲಕ ಕಾರ್ಯಕರ್ತರು ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಾಮನಗೌಡ ಇಟ್ಟಿಗಿ, ಬಿಜೆಪಿ ಯುವ ಮೋರ್ಚಾ ಆಧ್ಯಕ್ಷ ವಿನೋಧ ಜಾಡರ್, ವೀರೇಶ ಮಾತನಾಡಿ ಪಕ್ಷವನ್ನು ಬೂತಮಟ್ಟದಿಂದ ಸಂಘಟಿಸಲಾಗಿದೆ. ಪಕ್ಷದಲ್ಲಿ ದುಡಿದವರಿಗೆ ಟಿಕೆಟ್ ನೀಡಿ ಇಲ್ಲದಿದ್ದರೇ ನಾವು ಪಕ್ಷದ ಪರ ಚುನಾವಣೆ ಮಾಡುವುದಿಲ್ಲ ಎಂದು ಎಚ್ಚರಿಸಿದರು. ಪುರಸಭೆ ಸದಸ್ಯ ಎ.ಜೆ.ವೀರೇಶ, ಬಿಸಿ.ಮಂಜುನಾಥ ನಾಯ್ಕ, ತಿಮ್ಮಾನಾಯ್ಕ, ಎಂ.ಚಂದ್ರಶೇಖರ, ವಿ.ಬಿ.ಶಿವಾನಂದ, ನಾಗೇಶ,ಗಿಣಿ ಪ್ರಕಾಶ,ನಾಗರಾಜ,ಪರಶುರಾಮ,.ಸುರೇಶ, ಹುಲಗಪ್ಪ,ವಿರುಪಾಕ್ಷಪ್ಪ,ಪದ್ಮರಾಜ, ನೀಲಪ್ಪ,ಗಡಿಗಿ ವಿಶ್ವನಾಥ, ನೀಲಪ್ಪ ಹ್ಯಾರಡ,ಕೆ.ಷಣ್ಮುಖಪ್ಪ, ಬಿ.ಸಿ.ಮಂಜುನಾಥ ಇದ್ದರು. 


ಸುದ್ದಿ ಓದಿ