ಇಂಡಿ

ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಇಂಡಿಯಲ್ಲಿ ಪ್ರತಿಭಟನೆ

ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಇಂಡಿಯಲ್ಲಿ ಪ್ರತಿಭಟನೆ


ಲೋಕದರ್ಶನ ವರದಿ 

          ಇಂಡಿ 31 : ಕಬ್ಬಿಗೆ ಪ್ರತಿ ಟನ್ಗೆ ರೂ. 5500 ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘ, ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಇಂಡಿ ನಗರದ ಬಸವೇಶ್ವರ ವೃತ್ತದಲ್ಲಿ ಭೃಹತ್ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಮಾಳಪ್ಪ ಪೂಜಾರಿ, ಶರಣು ಬಂಡಿ, ಬಾಲು ಮುಳಜಿ, ಅಯೂಬ್ ನಾಟಕಾರ, ಅಂಬುರಾಯ ಕಮಟವಿ, ಎಸ್‌.ಬಿ. ಕಂಬೋಗಿ, ಪ್ರಶಾಂತ ಲಾಳಸಂಗಿ ಮಾತನಾಡಿ, ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡುವುದರಲ್ಲಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷ್ಯ ತೋರುತ್ತಿವೆ.

          ಸಕ್ಕರೆ ಕಾರ್ಖಾನೆಗಳು ರೂ. 4500 ಹಾಗೂ ರಾಜ್ಯ ಸರ್ಕಾರ ರೂ. 1000 ಸೇರಿ ಒಟ್ಟು ರೂ. 5500 ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಾಸುಗೌಡ ಬಿರಾದಾರ, ರವಿಕಿರಣ ಕೆರೂಟಗಿ, ಶ್ರೀಶೈಲ ಮದರಿ, ಶಂಕರಗೌಡ ಪಾಟೀಲ, ಹಣಮಂತಗೌಡ ಪಾಟೀಲ, ಭೀಮಾಶಂಕರ ಆಲೂಗರ, ಅನೀಲ ಜಾಮದಾರ, ಅನೀಲಗೌಡ ಬಿರಾದಾರ, ಭೀಮರಾಯ ಪೂಜಾರಿ, ಸುರೇಶ ಬಾಗೇಹಳ್ಳಿ, ಮಲ್ಲಿಕಾರ್ಜುನ ನಾಟಕಾರ, ಸೋಮು ನಿಂಬರಗಿಮಠ, ಮಹೇಶ ಹೂಗಾರ, ಶಾಂತು ಲಾಳಸಂಗಿ, ಎಸ್‌.ಟಿ. ಪಾಟೀಲ ಮುಂತಾದವರಿದ್ದರು. ಬೆಳಿಗ್ಗೆ 10 ಗಂಟೆಗೆ ಎಲ್ಲಾ ಅಂಗಡಿ ಮುಟ್ಟುಗಳು ಮುಚ್ಚಿದ್ದವು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಂದ್ ಮಾಡಿಸಲಾಯಿತು.

              ಯಾವುದೇ ಬಸ್ಸಿನ ಸೌಕರ್ಯವಿರಲಿಲ್ಲ. ಇದರಿಂದ ಬೇರೆ ಊರಿಗೆ ಹೋಗುವ ಪ್ರಯಾಣಿಕರು ಪರದಾಡಬೇಕಾಯಿತು. ಪೊಲೀಸ್‌-ರೈತರ ನಡುವೆ ಸಂಘರ್ಷಮೊದಲು ಅಂಗಡಿಕಾರರು ಸ್ವಯಂಪ್ರೇರಿತರಾಗಿ ಅಂಗಡಿ ಮುಚ್ಚಿ ಬಂದ್ ಮಾಡಿ ಬೆಂಬಲ ಸೂಚಿಸಿದ್ದರು. ಆದರೆ ಪೊಲೀಸ್ ಇಲಾಖೆಯವರು, ರೈತರು ಅಂಗಡಿಕಾರರಿಗೆ ಬಲವಂತವಾಗಿ ಬಂದ್ ಮಾಡಿಸಬಾರದು, ಅವರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಲಿ ಎಂದು ಮೈಕ್ನಲ್ಲಿ ಹೇಳತೊಡಗಿದರು. ಇದರಿಂದ ಗೊಂದಲ ಉಂಟಾಗಿ ಅಂಗಡಿಕಾರರು ಅಂಗಡಿ ತೆರೆಯಲು ಮುಂದಾದರು.

            (ಶಾಹನಾ ವಾಹನ, ಆರೋಗ್ಯ ಇಲಾಖೆ ವಾಹನ ಮತ್ತು ಆಂಬುಲೆನ್ಸ್ಗಳಿಗೆ ವಿನಾಯಿತಿ ನೀಡಲಾಗಿತ್ತು). ಹಾಗೂ ಲಚ್ಯಾಣದಲ್ಲಿ ಬಂದ್ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ರೈತರು ಕಬ್ಬಿನ ಬೆಂಬಲ ಬೆಲೆಗಾಗಿ ಬಂದ್ ಮಾಡಿಸಿ, ರಸ್ತೆ ತಡೆ ನಡೆಸಿದರು.ಬಿ.ಐ. ಬಿರಾದಾರ, ಎ.ಪಿ. ಕಾಗವಾಡಕರ, ಮಹಾದೇವ ಮುಡಗೌಂಡ ಮಾತನಾಡಿದರು. ರೈತ ಮುಖಂಡರಾದ ಗೌರಿಶಂಕರ ಬಾಬಳಾಗಾಂವ, ವಿಠ್ಠಲ ಕರಾಳೆ, ಕಾಶಿನಾಥ ಮುಡಗೌಂಡ, ಚಂದ್ರಕಾಂತ ಬಾಭಳವಿ, ಫೂಲಸಿಂಗ್ ಚವಾಣ್, ಸಿದ್ಧು ವಾಲಿ ಮುಂತಾದವರಿದ್ದರು. 


ಸುದ್ದಿ ಓದಿ