ಗೋಕಾಕ್

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ಆಗ್ರಹಿಸಿ ಪ್ರತಿಭಟನೆ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ಆಗ್ರಹಿಸಿ ಪ್ರತಿಭಟನೆ

ಗೋಕಾಕ 28: ಶಾಸಕ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಕೈವಾಡವಿದ್ದು, ಈ ಕೂಡಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿ ರಮೇಶ ಜಾರಕಿಹೊಳಿ ಅವರ ಸಾವಿರಾರು ಅಭಿಮಾನಿಗಳು ಬೃಹತ್ ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ ಅವರ ಅಣುಕು ಶವಯಾತ್ರೆ ನಡೆಯಿಸಿ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರವಿವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಶಾಸಕರ ಅಭಿಮಾನಿಗಳು ಬಸವೇಶ್ವರ ವೃತ್ತದವರೆಗೆ ಡಿಕೆಶಿ ಅವರ ಅಣುಕು ಶವಯಾತ್ರೆ ನಡೆಯಿಸಿದರು.

ಬಸವೇಶ್ವರ ವೃತ್ತದಲ್ಲಿ ಡಿಕೆಶಿ ಪ್ರತಿಕೃತಿ ದಹಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ತಕ್ಷಣ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಅವರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ದಲಿತ ಮಹಿಳೆಯನ್ನು ಮುಂದಿಟ್ಟುಕೊಂಡು ಅಸಹ್ಯಕರ ರಾಜಕಾರಣ ಮಾಡುತ್ತಿರುವ ಶಿವಕುಮಾರ ಅವರಿಗೆ ಸರಕಾರ ತಕ್ಕಪಾಠ ಕಲಿಸವಂತೆ ಆಗ್ರಹಿಸಿದರು. 

ಸದನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಮೇಶ ಜಾರಕಿಹೊಳಿ ವಿರುದ್ಧ ದೊಡ್ಡಧನಿಯಲ್ಲಿ ಮಾತನಾಡಿದ್ದಾರೆ. ಈಗ ಸಿಡಿ ಪ್ರಕರಣದಲ್ಲಿರುವ ಯುವತಿಗೆ ದುಡ್ಡು ನೀಡಿ ಗೋವಾಗೆ ಕಳುಹಿಸುತ್ತಿದ್ದಾರೆ ಎಂದು ಆಡಿಯೋ ಬಿಡುಗಡೆಯಾಗಿದೆ ಇದನ್ನು ಯಾವ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲು ಹೇಳುತ್ತಿರಾ ಎಂದು ಯುವಕನೋರ್ವ ಮಾಧ್ಯಮದ ಮೂಲಕ ಸಿದ್ಧರಾಮಯ್ಯನವರಿಗೆ ಪ್ರಶ್ನಿಸಿದನು.

ವಿನೂತನ ಪ್ರತಿಭಟನೆ: ಸಿಡಿ ಪ್ರಕರಣದ ಹಿಂದೆ ಡಿ ಕೆ ಶಿವಕುಮಾರ ಕೈವಾಡ ಎಂಬ ಆರೋಪದ ಹಿನ್ನಲೆ  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರ ಅಣುಕು ಶವದ ಮುಂದೆ ಬೊಬ್ಬೆ ಹಾಕುತ್ತಿರುವ ರಮೇಶ್ ಅಭಿಮಾನಿಗಳು, ಅಣಕು ಶವಕ್ಕೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದರು. ಸತ್ತಪ್ಪ ಸತ್ತ... ಡಿ.ಕೆ.ಶಿವಕುಮಾರ ಸತ್ತ ಎಂದು ಘೋμÀಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಶವದ ಮುಂದೆ ತಮಟೆ ಬಾರಿಸಿ, ಪಟಾಕಿ ಸಿಡಿಸಿ ವಿನೂತನ ರೀತಿಯಲ್ಲಿ ಶವ ಯಾತ್ರೆ ಮಾಡಿದರು.

ಪೋಲಿಸರೊಂದಿಗೆ ವಾಗ್ವಾದ: ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಡಿ ಕೆ ಶಿವಕುಮಾರ ಅವರ ಅಣಕು ಶವಯಾತ್ರೆ ನಡೆಸಿ, ಬಸವೇಶ್ವರ ವೃತ್ತದಲ್ಲಿ ಅಣಕು ಶವಕ್ಕೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಂಕಿ ನಂದಿಸಲು ಮುಂದಾಗಿ ನಮ್ಮ ಪ್ರತಿಭಟನೆ ಹತ್ತಿಕ್ಕುವ ಕಾರ್ಯ ಪೋಲಿಸ್ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಕೆಲ ಹೊತ್ತು ಜಾರಕಿಹೊಳಿ ಅಭಿಮಾನಿಗಳ ಹಾಗೂ ಪೋಲಿಸರ ಮಧ್ಯೆ ವಾಗ್ವಾದ ಜರುಗಿತು.

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಲ, ಮುಖಂಡರಾದ ಸುರೇಶ ಸನದಿ, ಎಸ್ ವ್ಹಿ ದೇಮಶೆಟ್ಟಿ, ಶಾಮಾನಂದ ಪೂಜೇರಿ, ಕೆಂಪಣ್ಣ ಮೈಲನ್ನವರ, ಅಶೋಕ ಗೋಣಿ, ಮುತ್ತುರಾಜ ಜಮಖಂಡಿ, ಸುರೇಶ ಪತ್ತಾರ, ಶಿವಲಿಂಗಯ್ಯ ಹಿರೇಮಠ, ಅನೀಲ ತುರಾಯಿದಾರ, ರಾಜೇಶ್ವರಿ ವಡೆಯರ, ಕರುಣಾ ಗರುಡಕರ ಸೇರಿದಂತೆ ಶಾಸಕ ರಮೇಶ ಜಾರಕಿಹೊಳಿ ಅವರ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ