ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಬೈಲಹೊಂಗಲ05: ಪಟ್ಟಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ, ತಾಲ್ಲೂಕು ಘಟಕದಿಂದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ‘2ಎ’ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಸೋಮವಾರ ಬೃಹತ ಪ್ರತಿಭಟನಾ ಮೆರವಣಿಗೆ ನಡೆಯಿತು.
ಚೆನ್ನಮ್ಮ ವೃತ್ತದಲ್ಲಿ ಸಮಾಜ ಭಾಂದವರು ಸೇರಿ ಚೆನ್ನಮ್ಮನ ಆಶ್ವಾರೂಡ ಮೂರ್ತಿಗೆ ಗಣ್ಯ ಮಾನ್ಯರು ಗೌರವ ಸಲ್ಲಿಸಿ ನಂತರ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಚನ್ನಮ್ಮನ ವೃತ್ತದಿಂದ ಇಂಚಲ ಕ್ರಾಸ್, ಕೇಂದ್ರ ಬಸ್ ನಿಲ್ದಾಣ, ರಾಯಣ್ಣ ವೃತ್ತ ಹೊಸೂರ ರಸ್ತೆ ಮಾರ್ಗವಾಗಿ ಸಮಾರಂಭದ ವೇದಿಕೆಯವರೆಗೆ ಬೃಹತ್ ಮೆರವಣಿಗೆ ತೆರಳಿದರು. ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಮತ್ತು ವೀರರಾಣಿ ಕಿತ್ತೂರು ಚೆನ್ನಮ್ಮ ಸಮಾಧಿಗೆ ಗೌರವ ಸಮರ್ಿಸಿದರು.
ಕಣ್ಮನ ಸೆಳೆದ ಪೂರ್ಣಕುಂಭಮೇಳ: ಸಕಲ ವಾದ್ಯಮೇಳದೊಂದಿಗೆ ಅಪಾರ ಸಂಖ್ಯೆಯಲ್ಲಿ ಸುಮಂಗಲೆಯರು ಪೂರ್ಣಕುಂಭ ಹೊತ್ತು ಸಾಗಿದರು. ಮಹಿಳೆಯರ ಪೂರ್ಣಕುಂಭಮೇಳ ನೋಡುಗರ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ವಿಶ್ವಗುರು ಬಸವೇಶ್ವರ, ಅಕ್ಕಮಹಾದೇವಿ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸ್ವಾತಂತ್ರ್ಯ ಹೋರಾಟಗಾರರಿಗೆ, ಶಿವಶರಣರಿಗೆ ಜಯ ಘೋಷ ಕೂಗಿದರು. ಜೈ ಪಂಚಮಸಾಲಿ ಘೋಷಣೆಗಳು ಮೊಳಗಿದವು.
ಪೂಜ್ಯರ, ಗಣ್ಯರ ಅದ್ಧೂರಿ ಸ್ವಾಗತ: ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಬೆಳ್ಳಿ ಸಾರೋಟದಲ್ಲಿ ಮೆರವಣಿಗೆ ನಡೆಸಲಾಯಿತು. ಸಮಾಜ ಮುಖಂಡರಾದ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡ್ರ, ಶ್ರೀಶೈಲ ಬೋಳನ್ನವರ, ಎಚ್.ಎಸ್.ಶಿವಶಂಕರ , ಇನ್ನೂ ಹಲವಾರು ಮುಖಂಡರನ್ನು ಅದ್ಧೂರಿ ಸ್ವಾಗತ ಕೋರಿ ತೆರೆದ ವಾಹನದಲ್ಲಿ ಮುಖಂಡರ ಮೆರವಣಿಗೆ ನಡೆಸಲಾಯಿತು. ಅಲ್ಲಲ್ಲಿ ಜೆಸಿಬಿ ಹಾಗೂ ಮುಸ್ಲಿಂ ಸಮಾಜದ ಮುಖಂಡರಿಂದ ಮೆರವಣಿಗೆಯಲ್ಲಿ ಮೇಲೆ ಪುಷ್ಪ ಮಳೆಗೈಯಲಾಯಿತು.
ಕಲಾ ತಂಡಗಳು : ಮೆರವಣಿಗೆಯುದ್ದಕ್ಕೂ ಸುತಗಟ್ಟಿಯ ಭಜನಾಮೇಳ, ಕಡೊಲಿಯ ಝಾಂಝ ಮೇಳ, ಹೆಬ್ಬಳ್ಳಿಯ ಗೊಂಬೆಯಾಟ, ಮುತ್ತಲಗೇರಿ ಡೊಳ್ಳು ಮೇಳ, ಜಗ್ಗಲಗಿ ಮೇಳ ಕಳೆ ಹಾಗೂ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ಹೆಚ್ಚಿಸಿದವು.
ಬೈಕ್ ರಾ್ಯಲಿ: ನೂರಾರು ಯುವಕರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರಾ್ಯಲಿ ನಡೆಸಿ ಜೈಕಾರದ ಘೋಷಣೆಗಳು ಮೊಳಗಿಸಿದರು. ಈ ಸಂದರ್ಭದಲ್ಲಿ ಸಮಾಜದ ಅಪಾರ ಜನಸ್ತೋಮ ಪಾಲ್ಗೊಂಡಿದ್ದರು.
ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಹೇಶ ಹರಕುಣಿ, ಎಫ್.ಎಸ್.ಸಿದ್ದನಗೌಡರ, ಮಹಾಂತೇಶ ತುರಮರಿ, ವಿರೇಶ ಹಲಕಿ, ರಾಜಶೇಖರ ಮೂಗಿ, ಶಂಕರ ಮಾಡಲಗಿ, ಪ್ರೀತಿ ಪಾಟೀಲ, ರೋಹಿಣಿ ಪಾಟೀಲ, ಮೀನಾಕ್ಷಿ ಕುಡಸೋಮನ್ನವರ, ರತ್ನಾ ಗೋಧಿ, ಸೇರಿದಂತೆ ಸಾವಿರಾರು ಪಂಚಮಸಾಲಿ ಸಮಾಜ ಭಾಂದವರು ಇದ್ದರು.